ಮುಖ್ಯ ಪುಟ > ವಿವಿಧ > ಅಡುಗೆ > ಮಾಂಸಾಹಾರ > ಮಾಂಸ ಬಟಾಣಿ ಪಲ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಂಸ ಬಟಾಣಿ ಪಲ್ಯ
ಬೇಕಾಗುವ ಸಾಮಗ್ರಿಗಳ

ಮಾಂಸದ ತುಂಡುಗಳು, ಎಣ್ಣೆ, ದಾಲ್ಚಿನಿ, ಏಲಕ್ಕಿ, ಲವಂಗ, ಕರಿಬೇವು ಎಲೆಗಳು, ಸಾಸಿವೆ, ಈರುಳ್ಳಿ(ಪೇಸ್ಟ್ ಮಾಡಿದ್ದು), ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಅರಸಿನ, ಮೆಣಸಿನ ಪುಡಿ, ಧನಿಯ ಪುಡಿ, ಉಪ್ಪು, ನೀರು, ತಾಜಾ ಬಟಾಣಿ, ಮೊಸರು, ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ: ಪ್ರೆಶರ್‌ ಕುಕ್ಕರ್‌ವೊಂದರಲ್ಲಿ ಎಣ್ಣೆ ಹಾಕಿ ಅದು ಕಾದ ನಂತರ ಸಂಬಾರ ಪದಾರ್ಥಗಳೊಂದಿಗೆ ಕರಿಬೇವು ಮತ್ತು ಸಾಸಿವೆ ಎಲೆಗಳೊಂದಿಗೆ ಹುರಿಯಬೇಕು. ಸಾಸಿವೆ ಚೆನ್ನಾಗಿ ಸಿಡಿದ ನಂತರ ಈರುಳ್ಳಿ ಪೇಸ್ಟ್ ಜತೆ ಸೇರಿಸಿ ಕಂದು ಬಣ್ಣಕ್ಕೆ ತಿರುಗುವವರೆಗೂ ಹುರಿಯಬೇಕು.ನಂತರದಲ್ಲಿ ಪೇಸ್ಟ್ ಮಾಡಿಟ್ಟಿದ್ದ ಬೆಳ್ಳುಳ್ಳಿ ಮತ್ತು ಶುಂಠಿ ಸೇರಿಸಿಮದಲಿನಂತಯೇ ಹುರಿಯಬೇಕು. ಅದರಂತೆ ಇದಾದ ನಂತರ ಅರಸಿನ, ಮೆಣಸಿನ ಪುಡಿ, ಧನಿಯಪುಡಿಯನ್ನೂ 5 ನಿಮಿಷಗಳ ಕಾಲ ಹುರಿಯಬೇಕು.ಇದಕ್ಕೆ ಹಸಿ ಮಾಂಸ ತುಂಡುಗಳನ್ನು 4 ಚಮಚ ಉಪ್ಪನ್ನು 3 ಬಟ್ಟಲು ನೀರಿನ ಜತೆಗೆ ಸೇರಿಸಿ ಕದಡಬೇಕು.ಅನಂತರ ಇದನ್ನು 10 ನಿಮಿಷಗಳ ಕಾಲ ಬೇಯಿಸಿ ಮೊಸರು ಸೇರಿಸಿ ಚೆನ್ನಾಗಿ ಕಲಕಬೇಕು. ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪನ್ನು ಉಪಯೋಗಿಸಬಹುದು. ರೊಟ್ಟಿ ಅಥವಾ ಅನ್ನದ ಜತೆಗೆ ಇದನ್ನು ಸವಿಯಬಹುದು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾಂಸ ಬಟಾಣಿ ಪಲ್ಯ, Recipes, NonVeg
ಮತ್ತಷ್ಟು
ಫ್ರೈಡ್ ಚಿಕನ್
ಮಟನ್ ಫ್ರೈ
ಮಾಂಸ ಬೆಂಡೆಕಾಯಿ ಪಲ್ಯ
ಚಿಕನ್ ಉಪ್ಪಿನ ಕಾಯಿ
ಮೊಟ್ಟೆ ಆಮ್ಲೆಟ್
ಮಲೈ ಕಬಾಬ್