ಮುಖ್ಯ ಪುಟ > ವಿವಿಧ > ಅಡುಗೆ > ಮಾಂಸಾಹಾರ > ಮೊಟ್ಟೆ ಪನ್ನಿರ್ ಬಟಾಣಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೊಟ್ಟೆ ಪನ್ನಿರ್ ಬಟಾಣಿ
ಬೇಕಾಗುವ ಸಾಮಾಗ್ರಿಗಳ

ಬೇಯಿಸಿದ ಮೊಟ್ಟೆಗಳು, ಪನೀರ್, ಮೆಣಸಿನ ಪುಡಿ, ಅರಶಿನ ಪುಡಿ, ತಾಜಾ ಬಟಾಣಿ, ಕೆನೆಮೊಸರು, ನೀರು, ಟೊಮೇಟೋಪೂರಿ, ಈರುಳ್ಳಿ, ಎಣ್ಣೆ, ಗರಂ ಮಸಾಲಪುಡಿ, ಉಪ್ಪು, ಗೋಡಂಬಿ, ತೆಂಗಿನಕಾಯಿ ಚೂರು, ಗಸಗಸೆ(ಚೆನ್ನಾಗಿ ಅರೆದು ಪೇಸ್ಟ್ ಮಾಡಿದ್ದು), ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಶುಂಠಿ ಪೇಸ್ಟ್.

ಪಾಕ ವಿಧಾನ: ಮೊದಲು ಪನ್ನೀರ್ ಘನಗಳನ್ನು ಎಣ್ಣೆಯಲ್ಲಿ ಹಗುರವಾಗಿ ಹುರಿದಿಟ್ಟುಕೊಳ್ಳಿ. ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿ, ಹೆಚ್ಚಿದ ಈರುಳ್ಳಿ ಹೋಳುಗಳನ್ನು 3 ನಿಮಿಷ ಹುರಿಯಿರಿ. ಇದಕ್ಕೆ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಸೇರಿಸಿ 2 ನಿಮಿಷ ಹುರಿಯಿರಿ. ತದನಂತರ ಮೆಣಸಿನ ಪುಡಿ, ಅರಶಿನ,ಜೀರಿಗೆ ಪುಡಿ ಸೇರಿಸಿ ಕಲಕಿರಿ, ಎರಡು ನಿಮಿಷಗಳ ಕಾಲ ಸಣ್ಣ ಬೆಂಕಿಯಲ್ಲಿ ಹುರಿಯಿರಿ. ಟೊಮೇಟೋ ಪೂರಿ ಸೇರಿಸಿ ಚೆನ್ನಾಗಿ ಕಲಕಿ. ಬಟಾಣಿಯನ್ನು ತೆಗೆದಿರಿಸಿದಂತಹ ನೀರಲ್ಲಿ ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿ. ಇದಕ್ಕೆ 2 ಚಮಚ ಗೋಡಂಬಿ, 4 ತೆಂಗಿನಕಾಯಿ ಚೂರು, 2 ಟೇಬಲ್ ಚಮಚ ಗಸಗಸೆ ಚೆನ್ನಾಗಿ ಅರೆದು ಪೇಸ್ಟ್ ಮಾಡಿದ್ದನ್ನು ಸೇರಿಸಿ. ಪನೀರ್, ಮೊಟ್ಟೆಗಳು, ಕೆನೆಮೊಸರು ಮತ್ತು ಗರಂ ಮಸಾಲಪುಡು ಸೇರಿಸಿ 3 ನಿಮಿಷಗಳ ಕಾಲ ಕುದಿಯಲು ಬಿಡಿ. ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ರೊಟ್ಟಿಗಳೊಂದಿಗೆ ಸವಿಯಲು ಕೊಡಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೊಟ್ಟೆ ಪನ್ನಿರ್ ಬಟಾಣಿ, Recipies
ಮತ್ತಷ್ಟು
ಮಟನ್ ಬಿರಿಯಾನಿ
ಮಾಂಸ ಕಡಲೆ ಪಲ್ಯ
ಮಾಂಸ ಬಟಾಣಿ ಪಲ್ಯ
ಫ್ರೈಡ್ ಚಿಕನ್
ಮಟನ್ ಫ್ರೈ
ಮಾಂಸ ಬೆಂಡೆಕಾಯಿ ಪಲ್ಯ