ಮುಖ್ಯ ಪುಟ > ವಿವಿಧ > ಅಡುಗೆ > ಮಾಂಸಾಹಾರ > ಹುರಿದ ಮೊಟ್ಟೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹುರಿದ ಮೊಟ್ಟೆ
ಬೇಕಾಗುವ ಸಾಮಾನುಗಳು: ಆರು ಬೇಯಿಸಿದ ಮೊಟ್ಟೆ ,ಎರಡು ಈರುಳ್ಳಿ ,ಮೂರು ಶುಂಠಿ (ಚಿಕ್ಕದಾಗಿ ತುಂಡು ಮಾಡಿಕೊಳ್ಳಿ ), 1ಚಮಚ ಚಿಕನ್ ಮಸಾಲಾ ,ಎರಡು ಚಮಚ ಎಣ್ಣೆ ,ಅರ್ಧ ಚಮಚ ಅರಿಶಿಣ ಪುಡಿ ,ಅರ್ಧ ಚಮಚ ಪೆಪ್ಪರ್ ,ಮೆಣಸಿನಪುಡಿ ,ಅರ್ಧ ಚಮಚ ಕೆಂಪು ಮೆಣಸಿನ ಪುಡಿ ,ಒಂದು ಟೊಮೆಟೊ ,ರುಚಿಗೆ ತಕ್ಕಂತೆ ಉಪ್ಪು.

ಮಾಡುವ ವಿಧಾನ: ಬೇಯಿಸಿದ ಮೊಟ್ಟೆಯ ಸಿಪ್ಪೆ ತೆಗೆದು ಅದನ್ನು 2-3 ಹೋಳು ಮಾಡಿಕೊಳ್ಳಿ .ಎಣ್ಣೆಯನ್ನು ಬಿಸಿ ಮಾಡಿಕೊಂಡು ಮೊಟ್ಟೆಯನ್ನು ಅದರಲ್ಲಿ ನಿಧಾನವಾಗಿ ಕುದಿಸಿರಿ ಕುದಿಸುವಾಗ ಚಿಟಿಕೆಯಷ್ಟು ಅರಿಶಿನ ಮತ್ತು ಚಿಲ್ಲಿ ಪೌಡರ್ ಹಾಕಿ. ಅದು ಫ್ರೈ ಆದ ತಕ್ಷಣ ಅದನ್ನು ತೆಗೆದು ಇಡಿ. ಉಳಿದ ಅರಿಶಿನ ,ಮೆಣಸಿನ ಪುಡಿ ಮತ್ತು ಕಾಳುಮೆಣಸಿನಪುಡಿ ಹಾಗೂ ಚಿಕನ್ ಮಸಾಲಾಗಳನ್ನು ಸ್ವಲ್ಪ ನೀರು ಸೇರಿಸಿ ಪೇಸ್ಟ್‌ ಮಾಡಿಕೊಳ್ಳಿ. ಉಳಿದಿರುವ ಎಣ್ಣೆಯಲ್ಲಿ , ಈರುಳ್ಳಿ ಮತ್ತು ಶುಂಠಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಪೇಸ್ಟ್ ಅನ್ನು ಸೇರಿಸಿ ಪುನಃ ಹುರಿಯಿರಿ.ತುಂಡು ಮಾಡಿದ ಟೊಮೆಟೊ ಸೇರಿಸಿ ,ಉಪ್ಪು ಸೇರಿಸಿ 6-8 ನಿಮಿಷ ಬೇಯಿಸಿ ಟೊಮೆಟೊ ಬೆಂದ ನಂತರ ಬೇಯಿಸಿದ ಮೊಟ್ಟೆಯನ್ನು ಅದಕ್ಕೆ ಸೇರಿಸಿ(ಅದು ಒಡೆಯದಂತೆ ನೋಡಿಕೊಳ್ಳಿ ) ಒಂದು ನಿಮಿಷ ಬೇಯಿಸಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹುರಿದ ಮೊಟ್ಟೆ, Egg roast recipe
ಮತ್ತಷ್ಟು
ಮೊಟ್ಟೆ ಕಬಾಬ್
ಅಂಕೂರಿ ಮೊಟ್ಟೆ
ಮೊಟ್ಟೆ ಟೋಸ್ಟ್
ಮೊಟ್ಟೆ ಪಕೋಡಾ
ಎಗ್ ಮಂಚೂರಿ
ಎಗ್ ಕರಿ