ಮುಖ್ಯ ಪುಟ > ವಿವಿಧ > ಅಡುಗೆ > ಸಿಹಿತಿನಿಸು > ಗೋಡಂಬಿ ಬರ್ಫಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋಡಂಬಿ ಬರ್ಫಿ
ಬೇಕಾಗುವ ಸಾಮಾಗ್ರಿಗಳು:

ಸಕ್ಕರೆ - ಅರ್ಧ ಕೆಜಿ
ಗೋಡಂಬಿ - ಕಾಲು ಕೆಜಿ
ಏಲಕ್ಕಿ ಪುಡಿ - 1 ಚಮಚ
ತುಪ್ಪ - 50 ಗ್ರಾಂ
ತೆಂಗಿನಕಾಯಿ - ಅರ್ಧ ಹೋಳು
ಹಾಲು - 1 ಕಪ್

ಪಾಕ ವಿಧಾನ :

ತೆಂಗಿನಕಾಯಿ ಮತ್ತು ಗೋಡಂಬಿಯನ್ನು 1 ಚಮಚ ತುಪ್ಪದಲ್ಲಿ ಬೇರೆಬೇರೆಯಾಗಿ ಹುರಿಯಿರಿ. ಹುರಿದ ಗೋಡಂಬಿ ಮತ್ತು ತೆಂಗಿನಕಾಯಿಗೆ ಹಾಲು ಸೇರಿಸಿ ರುಬ್ಬಿಕೊಳ್ಳಿ.

ಒಲೆಯ ಮೇಲೆ ಪಾತ್ರೆ ಇಟ್ಟು ರುಬ್ಬಿದ ತೆಂಗಿನಕಾಯಿ ಮತ್ತು ಗೋಡಂಬಿಯನ್ನು ಹಾಕಿ ಅದಕ್ಕೆ ಸಕ್ಕರೆ ಬೆರೆಸಿ. ಸಕ್ಕರೆ ಕರಗುತ್ತಾ ಮಿಶ್ರಣಕ್ಕೆ ಹೊಂದಿಕೊಳ್ಳುತ್ತದೆ. ನಂತರ ಇದಕ್ಕೆ ತುಪ್ಪ ಮತ್ತು ಏಲಕ್ಕಿ ಸೇರಿಸಿ.

ಒಂದು ದೊಡ್ಡ ತಟ್ಟೆಗೆ ತುಪ್ಪವನ್ನು ಸವರಿ, ಮಿಶ್ರಣವನ್ನು ಇದರ ಮೇಲೆ ಸುರಿಯಿರಿ ಮತ್ತು ತುಸು ತಟ್ಟಿರಿ. ಸ್ವಲ್ಪ ತಣಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.

 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಮತ್ತಷ್ಟು
ಖೋವಾ ಬರ್ಫಿ
ಬದಾಮ್ ಮಿಲ್ಕ್ ಶೆಕ್
ಅನಾರಸ್
ಬಾದಾಮಿ ಕುಲ್ಫಿ
ಆಪಲ್ ಟಾಫಿ
ಹಲಸಿನ ಹಣ್ಣು ಪಾಯಸ