ಬೇಕಾಗುವ ಸಾಮಾಗ್ರಿಗಳು: ಗಟ್ಟಿ ಅವಲಕ್ಕಿ - ಕಾಲು ಕೆಜಿ ಬೆಲ್ಲ - ಅರ್ಧ ಅಚ್ಚು ತೆಂಗಿನಕಾಯಿ - ಒಂದು ಹೋಳು ಏಲಕ್ಕಿ - ಸ್ವಲ್ಪ
ಪಾಕ ವಿಧಾನ:
ಅವಲಕ್ಕಿಯನ್ನು ಶುಚಿಗೊಳಿಸಿ ನೀರಿನಲ್ಲಿ ನೆನೆಹಾಕಿ, ತೆಂಗಿನಕಾಯಿಯನ್ನು ತುರಿದುಕೊಳ್ಳಿರಿ.
ಬೆಲ್ಲ ಮತ್ತು ಏಲಕ್ಕಿಯನ್ನು ಪುಡಿ ಮಾಡಿಟ್ಟುಕೊಳ್ಳಿ.
ನಂತರ ನೆನೆಸಿಟ್ಟ ಅವಲಕ್ಕಿಯ ನೀರು ಬಸಿದು ತೆಂಗಿನತುರಿ, ಪುಡಿಮಾಡಿದ ಬೆಲ್ಲ ಮತ್ತು ಏಲಕ್ಕಿಯನ್ನು ಅವಲಕ್ಕಿಗೆ ಸೇರಿಸಿರಿ ಚೆನ್ನಾಗಿ ಮಿಶ್ರಮಾಡಿದರೆ ಸಿಹಿ ಅವಲಕ್ಕಿ ತಿನ್ನಲು ಸಿದ್ಧ. |