ಮುಖ್ಯ ಪುಟ > ವಿವಿಧ > ಅಡುಗೆ > ಸಿಹಿತಿನಿಸು > ಹಯಗ್ರೀವ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಯಗ್ರೀವ
ಬೇಕಾಗುವ ಸಾಮಾಗ್ರಿಗಳು:
ಕಡಲಬೇಳೆ - 100 ಗ್ರಾಂ
ಬೆಲ್ಲ - 1 ದೊಡ್ಡ ಅಚ್ಚು
ಗಸಗಸೆ - 50 ಗ್ರಾಂ
ತುಪ್ಪ - 3 ಚಮಚ
ಒಣಕೊಬ್ಬರಿ - 1 ಹೋಳು
ಹಾಲು - 1 ಬಟ್ಟಲು
ಏಲಕ್ಕಿಪುಡಿ - ಸ್ವಲ್ಪ

ಪಾಕ ವಿಧಾನ:

ಕಡಲೇಬೇಳೆಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ . ನಂತರ ಅದರ ನೀರನ್ನು ಸೋಸಿ ಚೆನ್ನಾಗಿ ಬೇಯಿಸಿ.

ಬೆಲ್ಲವನ್ನು ಪುಡಿ ಮಾಡಿಟ್ಟುಕೊಳ್ಳಿ. ಗಸಗಸೆಯನ್ನು ಹುರಿದು ಪುಡಿಮಾಡಿ.

ಒಲೆಯ ಮೇಲೆ ಬಾಣಲೆ ಇಟ್ಟು ತುಪ್ಪವನ್ನು ಬಿಸಿಮಾಡಿ ಬೇಯಿಸಿದ ಕಡಲೇಬೇಳೆಯನ್ನು ಹಾಕಿ ಚೆನ್ನಾಗಿ ಕಲಸುತ್ತಿರಿ.

ಸ್ವಲ್ಪ ಸಮಯದ ನಂತರ ಇದಕ್ಕೆ ಪುಡಿಮಾಡಿದ ಬೆಲ್ಲ, ಗಸಗಸೆ ಮತ್ತು ಕೊಬ್ಬರಿತುರಿಯನ್ನು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಕಲಸಿ.

ಕೊನೆಯಲ್ಲಿ ಹಾಲನ್ನು ಈ ಮಿಶ್ರಣಕ್ಕೆ ಸೇರಿಸಿ ಕಲಸುತ್ತಿರಿ. ಅದು ಗಟ್ಟಿಯಾದ ನಂತರ ಏಲಕ್ಕಿಪುಡಿ ಹಾಕಿ ಒಲೆಯಿಂದ ಕೆಳಗಿಳಿಸಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಮತ್ತಷ್ಟು
ಸಿಹಿ ಅವಲಕ್ಕಿ
ಆಲೂಗಡ್ಡೆ ಕೇಕ್
ಮಂಗಳೂರು ಒಬ್ಬಟ್ಟು(ಹೋಳಿಗೆ)
ಬ್ರೆಡ್ ಹಲ್ವಾ
ಗೋಡಂಬಿ ಬರ್ಫಿ
ಖೋವಾ ಬರ್ಫಿ