ಬೇಕಾಗುವ ಸಾಮಾಗ್ರಿಗಳು:
ರವೆ - 1 ಕಪ್ ಮೈದಾ - 1 ಕಪ್ ಗೋಧಿಹಿಟ್ಟು - 1 ಕಪ್ ಅಕ್ಕಿ ಹಿಟ್ಟು - 1 ಕಪ್ ಉಪ್ಪು ರುಚಿಗೆ ತಕ್ಕಷ್ಟು ಹಸಿಮೆಣಸಿನಕಾಯಿ - 2 ಜೀರಿಗೆ - 1 ಚಮಚ ನೀರುಳ್ಳಿ - 2 ಕೊತ್ತಂಬರಿ ಸೊಪ್ಪು ಬೆಣ್ಣೆ - 1 ಚಮಚ ಎಣ್ಣೆ
ಪಾಕ ವಿಧಾನ: ರವೆ ಮತ್ತು ಎಲ್ಲಾ ಹಿಟ್ಟುಗಳನ್ನು ಒಂದು ಪಾತ್ರೆಗೆ ಹಾಕಿ. ಇದಕ್ಕೆ ಉಪ್ಪು ಸಣ್ಣಗೆ ಹೆಚ್ಚಿದ ನೀರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಹಿ ಸೊಪ್ಪು, ಜೀರಿಗೆ ಮತ್ತು ಬೆಣ್ಣೆಯನ್ನು ಸೇರಿಸಿ ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ನಂತರ ಈ ಹಿಟ್ಟನ್ನು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿ ಬಾಳೆ ಎಲೆಯಲ್ಲಿ ಹಾಕಿ ತಟ್ಟಿ ನಂತರ ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಿರಿ.
|