ಮುಖ್ಯ ಪುಟ > ವಿವಿಧ > ಅಡುಗೆ > ಸಿಹಿತಿನಿಸು > ತುಪ್ಪಾನ್ನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತುಪ್ಪಾನ್ನ
ಬೇಕಾಗುವ ಸಾಮಾಗ್ರಿಗಳು : ಬಸ್ಮತಿ ಅಕ್ಕಿ, ತುಪ್ಪ, ಗೋಡಂಬಿ, ಒಣದ್ರಾಕ್ಷಿ, ನೀರುಳ್ಳಿ, ಬೆಳ್ಳುಳ್ಳಿ, ದಾಲ್ಚೀನಿ, ಏಲಕ್ಕಿ, ಕೊತ್ತಂಬರಿ ಸೊಪ್ಪು, ಉಪ್ಪು

ಪಾಕ ವಿಧಾನ : ಅಕ್ಕಿಯನ್ನು ತೊಳೆದು ಚೆನ್ನಾಗಿ ಅದರ ನೀರನ್ನು ಬತ್ತಿಸಿ. ಅಗಲವಾದ ಪಾತ್ರೆಯಲ್ಲಿ 3 ಚಮಚ ತುಪ್ಪವನ್ನು ಕಾಯಿಸಿ ಅದಕ್ಕೆ ಒಂದು ಇಡೀ ನೀರುಳ್ಳಿಯ ಹೋಳುಗಳನ್ನು ಹಾಕಿ ಬೇಯಿಸಿ.ಅದು ಕಂದು ಬಣ್ಣಕ್ಕೆ ತಿರುಗುವಾಗ ಒಲೆಯಿಂದ ತೆಗೆದಿಡಿ. ಸ್ವಲ್ಪ ತುಪ್ಪದಲ್ಲಿ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಪ್ರತ್ಯೇಕ ಪ್ರತ್ಯೇಕವಾಗಿ ಹುರಿದಿಡಿ. ಇನ್ನು ಸ್ಪಲ್ಪ ತುಪ್ಪದೊಂದಿಗೆ ಶುಂಠಿ,ಬೆಳ್ಳುಳ್ಳಿ,ಏಲಕ್ಕಿ, ದಾಲ್ಚೀನಿಯನ್ನು ಹದವಾಗಿ ಹುರಿಯಿರಿ. ಇನ್ನುಳಿದ ನೀರುಳ್ಳಿ ಹೋಳುಗಳನ್ನು ಅದರೊಂದಿಗೆ ಬೆರೆಸಿ ಕೈಬಿಡದಂತೆ ಹುರಿಯುತ್ತಾ ಇರಿ.ಇದಕ್ಕೆ ಅಕ್ಕಿಯನ್ನು ಹಾಕಿ ನೀರನ್ನು ಸೇರಿಸಿ10 ನಿಮಿಷಗಳ ಕಾಲ ಬೇಯಿಸಿ. ನೀರು ಕುದಿಯಲು ಪ್ರಾರಂಭವಾದಾಗ ಉಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ. ಪಾತ್ರೆಯಲ್ಲಿನ ಅಕ್ಕಿ ಬೆಂದು ಅದರ ನೀರು ಪೂರ್ತಿ ಆವಿಯಾದ ನಂತರ ಒಲೆಯಿಂದ ಕೆಳಗಿಳಿಸಿ, ಹುರಿದಿಟ್ಟ ನೀರುಳ್ಳಿ, ಗೋಡಂಬಿ, ಒಣದ್ರಾಕ್ಷಿಗಳನ್ನು ಬೆರೆಸಿ, ಬಿಸಿಯಾಗಿ ಬಡಿಸಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಾಸುಂಡಿ
ಉತ್ತತ್ತಿ ಹಲ್ವಾ
ಮದ್ದೂರು ವಡೆ
ಸಾಗು
ಕಿತ್ತಳೆ ಜೂಸ್
ಬಾದೂಷಾ