ಬೇಕಾಗುವ ಸಾಮಗ್ರಿ- ಕಂಡೆನ್ಸ್‌ಡ್ ಮಿಲ್ಕ್- ಒಂದು ಟಿನ್, ಗ್ಲುಕೋಸ್ ಬಿಸ್ಕೆಟ್ 500 ಗ್ರಾಂ, ಡ್ರೈಫ್ರುಟ್ಸ್ 1 ಕಪ್, ಕೊಬ್ಬರಿ ತುರಿ ಕಾಲು ಕಪ್, ಏಲಕ್ಕಿ ಒಂದು ಚಮಚ.
ಮಾಡುವ ವಿಧಾನ- ಗ್ಲುಕೋಸ್ ಬಿಸ್ಕೆಟ್‌ಗಳನ್ನು ಮಿಕ್ಸಿಗೆ ಹಾಕಿ ಸಣ್ಣಗೆ ನುಣ್ಣಗೆ ಪುಡಿ ಮಾಡಿಡಿ. ಎರಡು ಚಮಚ ಕೊಬ್ಬರಿ ತುರಿ ಹೊರತುಪಡಿಸಿ ಉಳಿದೆಲ್ಲಾ ಕೊಬ್ಬರಿ ತುರಿಯನ್ನು ಇದಕ್ಕೆ ಸೇರಿಸಿ. ಏಲಕ್ಕಿ ಪುಡಿ, ಡ್ರೈ ಫ್ರುಟ್ಸ್ ಕೂಡಾ ಹಾಕಿ. ಎಲ್ಲವನ್ನು ಕೈಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ ಕಂಡೆನ್ಸ್‌ಡ್ ಮಿಲ್ಕ್ ಹಾಕಿ ಚೆನ್ನಾಗಿ ಕೆಲಸಿ. ಇದನ್ನು ಸಣ್ಣ ಉಂಡೆಗಳಾಗಿ ಮಾಡಿ. ಉಂಡೆಗಳನ್ನು ಕೊಬ್ಬರಿ ತುರಿಯಲ್ಲಿ ಉರುಳಿಸಿ. ಒಂದು ಗಂಟೆ ಕಾಲ ಫ್ರಿಡ್ಜ್‌ನಲ್ಲಿಡಿ. ಈಗ ಗ್ಲುಕೋಸ್ ಲಡ್ಡು ರೆಡಿ. |