ಸಾಮಾಗ್ರಿ:ಅವಲಕ್ಕಿ- 250 ಗ್ರಾಂತೆಂಗಿನಕಾಯಿ- 1ಸೌತೆ ಕಾಯಿ- 100 ಗ್ರಾಂಮೊಸರು- 60 ಗ್ರಾಂಹಸಿ ಮೆಣಸು- 2ತುಪ್ಪ- 1 ಟೇಬಲ್ ಚಮಚಜೀರಿಗೆ -1 ಟೀ ಚಮಚಶುಂಠಿ- 1/2 ಇಂಚುಸಕ್ಕರೆ -1/2 ಟೀ ಚಮಚಉಪ್ಪು ರುಚಿಗೆ ತಕ್ಕಷ್ಟುವಿಧಾನ:10-15 ನಿಮಿಷಗಳ ಕಾಲ ಅವಲಕ್ಕಿಯನ್ನು ನೆನೆಸಿಡಿ.ಸೌತೆ ಕಾಯಿಯನ್ನು ದೊಡ್ಡದಾಗಿಯೂ, ಹಸಿ ಮೆಣಸು ಮತ್ತು ಶುಂಠಿಯನ್ನು ನುಣ್ಣನೆ ಹೆಚ್ಚಿರಿ. ಚಿಕ್ಕ ಬಾಣಲೆಯಲ್ಲಿ ತುಪ್ಪವನ್ನು ಕರಗಿಸಿ ಅದಕ್ಕೆ ಜೀರಿಗೆ, ಹಸಿ ಮೆಣಸು ಮತ್ತು ಶುಂಠಿಯನ್ನು ಸೇರಿಸಿ. ಅವಲಕ್ಕಿ ಮಿಶ್ರಣ ಮತ್ತು ಇನ್ನುಳಿದ ಸಾಮಾಗ್ರಿಗಳನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಕದಡಿಸಿ.ರುಚಿಯಾದ ಗೋಪಾಲಕಲವನ್ನು ಬಿಸಿಯಾಗಿ ಬಡಿಸಿ.ತಯಾರಿಸಲು ಬೇಕಾಗುವ ಸಮಯ :25 ನಿಮಿಷಗಳು.-ರಶ್ಮಿ ಪೈ |