ಬೇಕಾಗುವ ಸಾಮಾಗ್ರಿಗಳು: ಅವಲಕ್ಕಿ - 100 ಗ್ರಾಂ ಹೆಸರುಬೇಳೆ - 100 ಗ್ರಾಂ ತೆಂಗಿನಕಾಯಿ - ಅರ್ಧ ಹೋಳು ಹಸಿಮೆಣಸಿನಕಾಯಿ - 5-10 ಶುಂಠಿ ರಸ - 1 ಚಮಚ ಜೀರಿಗೆ - 1 ಚಮಚ ಉಪ್ಪು - ರುಚಿಗೆ ತಕ್ಕಷ್ಟು
ಪಾಕ ವಿಧಾನ: ಹೆಸರುಬೇಳೆ ಮತ್ತು ಅವಲಕ್ಕಿಯನ್ನು ನೀರಿನಲ್ಲಿ ಒಂದು ಗಂಟೆ ನೆನೆಯಲು ಬಿಡಿ. ಜೀರಿಗೆಯನ್ನು ಪುಡಿ ಮಾಡಿ ಹಾಗೂ ಹಸಿಮೆಣಸಿನಕಾಯಿಯನ್ನು ಸಣ್ಣ ಸಣ್ಣ ಚೂರು ಮಾಡಿ ಇಟ್ಟುಕೊಳ್ಳಿ.1 ಗಂಟೆ ನೆನೆಸಿದ ಹೆಸರುಬೇಳೆ ಮತ್ತು ಅಕ್ಕಿಯನ್ನು ಕಾಯಿತುರಿಯೊಂದಿಗೆ ರುಬ್ಬಿಕೊಳ್ಳಿ. ಈ ರುಬ್ಬಿದ ಹಿಟ್ಟಿಗೆ ಹಸಿಮೆಣಸಿನಕಾಯಿ ಚೂರುಗಳು, ಶುಂಠಿರಸ, ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.ಒಲೆಯ ಮೇಲೆ ಕಾವಲಿ ಇಟ್ಟು ದೋಸೆ ಹುಯ್ಯಿರಿ.
|