ಮುಖ್ಯ ಪುಟ  ವಿವಿಧ > ಅಡುಗೆ > ಸಸ್ಯಾಹಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೊಮ್ಯಾಟೋ - ನೀರುಳ್ಳಿ ಅವಿಯಲ್
ಬೇಕಾಗುವ ಸಾಮಾಗ್ರಿಗಳು:
ಟೊಮ್ಯಾಟೋ - 4
ನೀರುಳ್ಳಿ - 2
ಹಸಿಮೆಣಸಿನಕಾಯಿ - ರುಚಿಗೆ ತಕ್ಕಷ್ಟು
ತೆಂಗಿನತುರಿ - ಅರ್ಧ ಕಪ್
ಶುಂಠಿ - ಸಣ್ಣ ತುಂಡು
ಮೊಸರು - 4 ಚಮಚ
ಅರಶಿನ ಹುಡಿ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಯಾವುದೇ ಮಸಾಲಾ ಪುಡಿ - ಸ್ವಲ್ಪ

ಒಗ್ಗರಣೆಗೆ:
ಬೇವಿನ ಎಲೆ - ಸ್ವಲ್ಪ
ಎಣ್ಣೆ - 1 ಚಮಚ
ಸಾಸಿವೆ - ಸ್ವಲ್ಪ

ಪಾಕ ವಿಧಾನ:
ಟೊಮ್ಯಾಟೋ ಮತ್ತು ನೀರುಳ್ಳಿಯನ್ನು ಉದ್ದುದ್ದ ಕತ್ತರಿಸಿರಿ.ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ತುಂಡು ಮಾಡಿದ ನೀರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ.ಇದಕ್ಕೆ ತುಂಡು ಮಾಡಿದ ಟೊಮ್ಯಾಟೋ, ಉಪ್ಪು ಮತ್ತು ಅರಶಿನ ಪುಡಿ ಬೆರೆಸಿ 5 ನಿಮಿಷ ಹಾಗೇ ಬಿಡಿ.

ತೆಂಗಿನತುರಿ, ಹಸಿಮೆಣಸಿನಕಾಯಿ ಮತ್ತು ಮೊಸರನ್ನು ಮೃದುವಾಗಿ ರುಬ್ಬಿ, ಇದಕ್ಕೆ ಸೇರಿಸಿ.5 ನಿಮಿಷ ನಂತರ ಒಲೆಯಿಂದ ಕೆಳಗಿಳಿಸಿ ಸಾಸಿವೆ ಕರಿಬೇವಿನ ಒಗ್ಗರಣೆ ಕೊಡಿ.
ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.
ಮತ್ತಷ್ಟು
ಲೇಹ್ಸುನಿ ದಾಲ್
ಬಟಾಟೆ ಮೊಸರು ಕರಿ
ಬಳ್ಳಾರಿ ಸಾರು
ತುಪ್ಪಾನ್ನ
ಮೈದಾ ಪಕೋಡಾ
ಬೆಂಡೆಕಾಯಿ ರಾಯತ