ಮುಖ್ಯ ಪುಟ  ವಿವಿಧ > ಅಡುಗೆ > ಸಸ್ಯಾಹಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೊಮ್ಯಾಟೋ ಬ್ರೆಡ್
ಬೇಕಾಗುವ ಸಾಮಾಗ್ರಿಗಳು :

ಬಟಾಟೆ - 1
ಟೊಮ್ಯಾಟೋ - 1
ಬೇವಿನ ಎಲೆ - ಸ್ವಲ್ಪ
ಹಸಿಮೆಣಸಿನಕಾಯಿ - 4
ನೀರು - 1 ಕಪ್
ಬ್ರೆಡ್ - 5-6
ಎಣ್ಣೆ - 2 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಅರಶಿನ ಪುಡಿ - ಸ್ವಲ್ಪ
ಕೊತ್ತಂಬರಿ ಸೊಪ್ಪು

ಪಾಕ ವಿಧಾನ :

ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಹೆಚ್ಚಿದ ಬಟಾಟೆ, ಹಸಿಮೆಣಸಿನಕಾಯಿ ಮತ್ತು ಬೇವಿನ ಎಲೆಯನ್ನು ಹಾಕಿ ಕಡಿಮೆ ಉರಿಯಲ್ಲಿ ಪಾತ್ರೆ ಮುಚ್ಚಳ ಮುಚ್ಚಿ ಸ್ವಲ್ಪ ಹೊತ್ತು ಬಿಡಿ.

ಬಟಾಟೆ ಬೆಂದ ನಂತರ, ಹೆಚ್ಚಿದ ಟೊಮ್ಯಾಟೋ ಹಾಕಿ 5 ನಿಮಿಷ ಹುರಿಯಿರಿ. ನಂತರ ಇದಕ್ಕೆ ನೀರು, ಉಪ್ಪು, ಅರಶಿನ ಪುಡಿ ಸೇರಿಸಿ ಸ್ವಲ್ಪ ಹೊತ್ತು ಬಿಡಿ.

ನಂತರ ಇದಕ್ಕೆ ಬ್ರೆಡ್ ಸೇರಿಸಿ ಚೆನ್ನಾಗಿ ಕಲಸಿ.ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಮತ್ತಷ್ಟು
ಟೊಮ್ಯಾಟೋ - ನೀರುಳ್ಳಿ ಅವಿಯಲ್
ಲೇಹ್ಸುನಿ ದಾಲ್
ಬಟಾಟೆ ಮೊಸರು ಕರಿ
ಬಳ್ಳಾರಿ ಸಾರು
ತುಪ್ಪಾನ್ನ
ಮೈದಾ ಪಕೋಡಾ