ಮುಖ್ಯ ಪುಟ > ವಿವಿಧ > ವೆಬ್ ದುನಿಯಾ ವಿಶೇಷ 07 > ತಿರುಮಲ ಬ್ರಹ್ಮೋತ್ಸವ
 
ತಿರುಮಲದಲ್ಲಿ ಪೆದ್ದ ಶೇಷ ವಾಹನೋತ್ಸವ
WD
ತಿರುಮಲ ತಿರುಪತಿಯಲ್ಲಿ ಭಕ್ತಿ ಭಾವದ ಬ್ರಹ್ಮೋತ್ಸವವು ಶನಿವಾರ ಅದ್ದೂರಿ ಚಾಲನೆ ಪಡೆದುಕೊಂಡಿದ್ದು, ಸಂಜೆ ಧ್ವಜಾರೋಹಣದೊಂದಿಗೆ ವಿಧಿಬದ್ಧವಾಗಿ 9 ದಿನಗಳ ವೈಭವೋತ್ಸವಕ್ಕೆ ಆರಂಭ ದೊರೆಯಿತು.

ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರು ತಿರುಮಲ ಗಿರಿಯೊಡೆಯನಿಗೆ ಪಟ್ಟೆ-ಪೀತಾಂಬರ ಸಲ್ಲಿಸಿ ಧ್ವಜಾರೋಹಣ ಕಾರ್ಯದಲ್ಲಿ ಭಾಗವಹಿಸಿದರು.

ದೇಶ ವಿದೇಶದಿಂದ ಭಕ್ತಾದಿಗಳು ತಿರುಮಲ ಸನ್ನಿಧಾನಕ್ಕೆ ಆಗಮಿಸುತ್ತಿದ್ದಾರೆ. ರಾತ್ರಿ ನಡೆಯುತ್ತಿರುವ ಪೆದ್ದ ಶೇಷ ವಾಹನ (ದೊಡ್ಡ ಶೇಷ ವಾಹನ) ಉತ್ಸವವನ್ನು ಕಣ್ಣಾರೆ ಕಂಡು ಪುನೀತರಾಗಲು ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದಾರೆ.

ರಾಜಬೀದಿಗಳೆಲ್ಲವೂ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದ್ದು, ಬಿಗಿ ಪೊಲೀಸ್ ಪಹರೆಯನ್ನು ಕೂಡ ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದೆ.

ಈ ಸಂದರ್ಭ ವೆಬ್‌ದುನಿಯಾ ತಾಣ ಸಿದ್ಧಪಡಿಸಿದ ವೀಡಿಯೋ ಸಹಿತದ ವಿಶೇಷ ಪುಟ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು
ತಿರುಪತಿ ಬ್ರಹ್ಮೋತ್ಸವ ವಿಧಿಗಳಿಗೆ ಚಾಲನೆ
ಸೆ.23 ಸಂಜೆ ಬಂಗಾರು ತಿರುಚ್ಚಿ ಉತ್ಸವ, ಧ್ವಜಾವರೋಹಣ
ಸೆ.23 ಬೆಳಿಗ್ಗೆ ಪಲ್ಲಕ್ಕಿ ಉತ್ಸವ, ಚಕ್ರಸ್ನಾನ
ಸೆ.22 ಸಂಜೆ ಅಶ್ವವಾಹನ ಉತ್ಸವ
ಸೆ.22 ಬೆಳಿಗ್ಗೆ ರಥೋತ್ಸವ
ಸೆ.21 ಸಂಜೆ ಚಂದ್ರಪ್ರಭ ವಾಹನ