ಆನೆ ಮೊಗದ, ಮಹಾಕಾಯದ, ಕೋಟಿ ಸೂರ್ಯನಿಗೆ ಸಮವಾದ ಪ್ರಭೆಯುಳ್ಳ ಸರ್ವ ವಿಘ್ನಗಳ ನಿವಾರಕನೆ, ಸರ್ವಕಾರ್ಯವನ್ನು ಶುಭವಾಗಿಸು ದೇವನೆ ಎಂಬುದು ಈ ಶ್ಲೋಕದ ಭಾವಾರ್ಥ. ಯಾವುದೇ ಕಾರ್ಯ ಆರಂಭಿಸುವುದಿದ್ದರೆ ಮೊದಲ ಪೂಜೆ ಗಣಪತಿಗೆ. ಎಲ್ಲ ವಿಘ್ನಗಳ ನಿವಾರಿಸುವ ದೇವನೆ ಎಂದು ಪೂಜಿಸಿ ಕಾರ್ಯ ಆರಂಭಿಸುವುದು ಹಿಂದೂ ಸಂಪ್ರದಾಯ.
ಶಿವಪಾರ್ವತಿಯರ ಮುದ್ದಿನ ಕುಮಾರ ಗಣೇಶನ ಹುಟ್ಟಿದ ದಿನ ವಿನಾಯಕ ಚತುರ್ಥಿ. ವಿಶ್ವಾದ್ಯಂತ ಭಕುತಜನ ಈ ದಿನವನ್ನು ಅತ್ಯಂತ ಶುಭದಿನವೆಂದು ಪರಿಗಣಿಸಿ ಅತೀವ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಭಾದ್ರಪದ ಮಾಸದ ಶುಕ್ಲಪಕ್ಷದ ನಾಲ್ಕನೆ ದಿವಸವನ್ನು ಗಣೇಶ ಚತುರ್ಥಿಯಾಗಿ ಆಚರಿಸಲಾಗುತ್ತದೆ.ಗಣಪತಿ ಒಲಿದರೆ ಸರ್ವವಿಘ್ನಗಳು ನಾಶಗೊಂಡು ಸರ್ವಕಾರ್ಯಗಳು ಸಿದ್ಧಿಸುತ್ತವೆ. ... |