ಚಂದ್ರಾವತಿ ಬಡ್ಡಡ್ಕ NRB ದುಷ್ಟಶಕ್ತಿಯ ಸಂಹಾರದ ಸಂಕೇತ ದಸರಾ ಆಚರಣೆ. ತಾಯಿ ಚಾಮುಂಡೇಶ್ವರಿ ಮಹಿಷಾಸುರನ ವಿರುದ್ಧ ಸಾಧಿಸಿದ ವಿಜಯದ ಆಚರಣೆ ಮೈಸೂರು ದಸರಾ ಎಂದು ಪುರಾಣಗಳು ಹೇಳುತ್ತವೆ. ಜಗದ್ವಿಖ್ಯಾತಿಯ ಮೈಸೂರು ದಸರಾ ಆಚರಣೆಗೆ ಶತಮಾನಗಳ ಇತಿಹಾಸ ಇದೆ. ಮೈಸೂರು ದಸರಾ ಮೈಸೂರು ಜನಜೀವನದ ಒಂದು ಭಾಗವೇ ಆಗಿ ಹೋಗಿದೆ. ಈ ದಸರಾ ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ ಇದೀಗ ಅದು ಕರ್ನಾಟಕದ ನಾಡಹಬ್ಬವಾಗಿ ಆಚರಿಸಲ್ಪಡುತ್ತಿದೆ.ಕರ್ನಾಟಕದಲ್ಲಿ ವಿಜಯನಗರದ ಸಂಸ್ಥಾನದ ಆಡಳಿತಾವಧಿಯಲ್ಲಿ ದಸರಾ ಆಚರಣೆಗೆ