ಮೈಸೂರು ಮಲ್ಲಿಗೆಯ ತವರೂರು. ಘಮ್ಮೆನುವ ಸೂಜಿ ಮಲ್ಲಿಗೆ, ಜಾಜಿ ಮಲ್ಲಿಗೆ, ದುಂಡು ಮಲ್ಲಿಗೆ ಎಲ್ಲೆ ಎಲ್ಲೆಗೆ ಹರಡಿ ಪರಿಮಳ ಬೀರುತ್ತವೆ. ಮೊಗ್ಗಿನ ಮಾಲೆಯ ಮುಡಿದು ದಸರೆಯ ಸವಾರಿ ನೋಡಲೆಂದು ಹೊರಡುವ ಹೆಂಗಳೆಯರು ಮೈಸೂರ ಚಂದಕ್ಕೊಂದು ಗರಿಮೆಯಾದರೆ ಮಲ್ಲಿಗೆಯ ರಾಶಿ ರಾಶಿಯನ್ನು ದಸರೆಯ ಸಂದರ್ಭದಲ್ಲಿ ಬೀದಿ ಬೀದಿಗಳಲ್ಲಿ ಕಾಣಬಹುದು.ಬಹುಶಃ ಮೈಸೂರ ಮಲ್ಲಿಗೆಯ ಪರಿಮಳಕ್ಕೆ ಸೋತೇ ಪ್ರೇಮ ಕವಿ ಕೆ.ಎಸ್. ನರಸಿಂಹ ಸ್ವಾಮಿ ತಮ್ಮ ಮೈಸೂರು ಮಲ್ಲಿಗೆ ಕವನ ಸಂಕಲನದಲ್ಲಿ ಹೂವು ಬೇಕೇ