NRB ವಿಶೇಷ ವರದಿ ನಾಡ ಹಬ್ಬ ಮೈಸೂರು ದಸರಾದ ವಿಶೇಷ ಆಕರ್ಷಣೆ ಜಂಬೂ ಸವಾರಿ ವೈಭವದಿಂದ ನಡೆಯಿತು. ಚಿನ್ನದ ಅಂಬಾರಿಯನ್ನು ಹೊತ್ತ ಗಜರಾಜ ಬಲರಾಮ ಶಾಂತವಾಗಿಯೇ ಮೆರವಣಿಯಲ್ಲಿ ಹೆಜ್ಜೆ ಹಾಕುತ್ತಿದ್ದ. ಕೊಂಬು, ಕಹಳೆಯ ನಿನಾದ, ವೈಭವೋಪೇತ ವಾದ್ಯ ಸಂಗೀತ, ಅರಮನೆ ಸೈನಿಕರನ್ನು ನೆನಪಿಸುವ ವಾದ್ಯ ಸಂಗೀತ, ಈ ಬಾರಿಯ ವಿಶೇಷವಾಗಿತ್ತು. ಈ ಬಾರಿ ಮೆರವಣಿಗೆಯಲ್ಲಿ 26 ಸ್ತಬ್ಧ ಚಿತ್ರಗಳಿದ್ದು, ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಎಲ್ಲರ ಗಮನ ಸೆಳೆದವು.