ಮುಖ್ಯ ಪುಟ > ವಿವಿಧ > ವೆಬ್ ದುನಿಯಾ ವಿಶೇಷ 07 > ದೀಪಾವಳಿ
 
ಭಯಂಕರ ಪಟಾಕಿ
WD
(ರಂಗ ಪಟಾಕಿ ವ್ಯಾಪಾರಿಯಲ್ಲಿ)

ರಂಗ:(ಗರ್ವದಿಂದ) ಸ್ವಾಮೀ ನನಗೊಂದು ಪಟಾಕಿ ಕೊಡಿ. ಅದು ಕಡಿಮೆ ಬೆಲೆಯದ್ದಾಗಿದ್ದು, ಅದರ ಶಬ್ದ ಕೇಳಿ ನೆರೆಮನೆಯವರೆಲ್ಲ ಎದ್ದು ಹೊರಗೆ ಬಂದು ನಮ್ಮ ಮನೆಯತ್ತವೇ ದೃಷ್ಟಿ ಹರಿಸಬೇಕು.ಈವರೆಗೆ ಯಾರೂ ಸದ್ದು ಮಾಡಿರದಷ್ಟು ಶಬ್ದ ನಮ್ಮ ಮನೆಯಿಂದ ಕೇಳಬೇಕು.

ವ್ಯಾಪಾರಿ: (ತುಸು ಆಲೋಚಿಸಿ) ಸ್ವಾಮೀ ನೀವು ಹೇಳಿದಂತಹ ಪಟಾಕಿ ಈ ಅಂಗಡಿಯಲ್ಲಿ ಇಲ್ಲ.ಆದ್ರೂ ನಾನು ಒಂದು ಉಪಾಯ ಹೇಳಬಲ್ಲೆ. ಇದರಿಂದಾಗಿ ಊರೇ ಎದ್ದು ಹೊರಗೆ ಬರುತ್ತದೆ .ನೋಡಿ!!

ರಂಗ:(ಕುತೂಹಲದಿಂದ)ಹೇಳಿ...

ವ್ಯಾಪಾರಿ:ಈ ಪಟಾಕಿಗೆ ಬೆಲೆ ತೀರಾ ಕಡಿಮೆ.(ಗುಟ್ಟಿನಲ್ಲಿ)ನಿಮ್ಮ ಹೆಂಡತಿಯಲ್ಲಿ ನೀವು ನೆರೆಮನೆಯಾಕೆಯನ್ನು ಪ್ರೀತಿಸುತ್ತೇನೆ ಎಂದು ಹೇಳಿ ಬಿಡಿ. ಮತ್ತೆ ನೋಡುತ್ತಾ ಇರಿ. ಊರಿಗೇ ಊರೇ ನಿಮ್ಮ ಅಂಗಳದಲ್ಲಿರುತ್ತದೆ.

ರಂಗ:!!!!!!
ಮತ್ತಷ್ಟು
ಪಾತಾಳದಲ್ಲಿ ಭೂಮಿ
ದಾರಿ ಖರ್ಚಿಗೆ ಆಭರಣ
ಮುಗಿಯದ ಮಾಲೆ ಪಟಾಕಿ
ದೀಪಾವಳಿ ತಿನ್ನಲಾಗುವುದಿಲ್ಲ!
ಕೇಸರಿ ಬಾತ್
ಜಿಲೇಬಿ