WD ಹಳೆಯ ಕೆಳೆಯರ ಮರೆಯ ಬಹುದೇ ಕಳೆದ ಹಿಂದಿನ ದಿನಗಳಾ.... ಕನ್ನಡದ ಈ ಕವಿಯುಲಿ, ಗೆಳೆತನದ ಹರಹನ್ನು ಅರಿತವರಿಗಷ್ಟೇ ಅನುಭವವಾಗುವ ಸಾಲುಗಳು.ಇಂದು ಆಚರಿಸುವ ಫ್ರೆಂಡ್ಶಿಪ್ ಡೇ ಎಂಬ ಗೆಳೆಯರ ದಿನ ಈ ಭಾವನಾತ್ಮಕ ಸಂಬಂಧದ ವಾಣಿಜ್ಯೀಕರಣವಿರಬಹುದು.ಆದರೆ ಪರಸ್ಪರ ಪೈಪೋಟಿ, ಕಿತ್ತಾಟ, ಥಳುಕಿನ ಈ ಯುಗಧರ್ಮದಲ್ಲಿ ಗೆಳೆತನದ ನವಿರು-ಭಾವನೆಗಳನ್ನು ಅರ್ಥೈಸುವವರು ಇರಬಹುದೇ...? ಇದ್ದಾರೆ ಲೈಮ್ಲೈಟ್ನಲ್ಲಿ ಕಾಣಲಾರರು ಅಷ್ಟೇ...ಗೆಳೆಯರಲ್ಲಿ ಹಲವು ವಿಧ `ಅಂವ ನನ್ ಚಡ್ಡೀ ಗೆಳ್ಯಾ ಅನ್ನುವಲ್ಲಿನ ಅತ್ಮೀಯತೆ, ನಾವಿಬ್ರೂ ಕ್ಲಾಸ್ಮೇಟ್ಸ್