- ವೇದಾ ಗಿರೀಶ್ ಗೆಳೆತನ ದಿನ ಬಂತೆಂದರೆ ಏನೋ ಸಂತೋಷ, ಎಲ್ಲಿಲ್ಲದ ಸಂಭ್ರಮ, ಏಕೆಂದರೆ ಅಂದು ಕಾಲೇಜಿಗೆ ಚಕ್ಕರ್ ಹೊಡೆದು ಥಿಯೇಟರ್ ಕಡೆಗೆ ಓಡುವ ಕಾತುರ, ಕಾಲೇಜಿಗೆ ಹಾಜರ್ ಆದರೂ ಪಾಠದ ಕಡೆ ಗಮನವಿಡದೆ ಅಂದಿನ ಕಾರ್ಯಕ್ರಮದ ಬಗ್ಗೆ ಪಟ್ಟಿ ಹಾಕುತ್ತಾ ಏನೇನು ಮಾಡಬೇಕು, ಎಲ್ಲಿಗೆ ಹೋಗಬೇಕೆಂಬ ಚರ್ಚೆ ನಡೆಯುತ್ತಿತ್ತೇ ವಿನಃ, ಉಪನ್ಯಾಸಕರ ಬೋಧನೆ ಅಂದಿನ ಮಟ್ಟಿಗೆ ಗೋಡೆ ಹಾಗೂ ಬೆಂಚುಗಳ ಪಾಲಾಗಿತ್ತು. ಈ ಗೆಳೆತನದಲ್ಲಿ ಎಷ್ಟೊಂದು ಮಜಾ, ಉಲ್ಲಾಸವೆಂದರೆ