(ನ್ಯೂಸ್ ರೂಂ ಬೆಂಗಳೂರು) NRB ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಅವರಿಗೆ 60 ವರ್ಷ. ಸ್ವಾತಂತ್ರ್ಯ ಸಿಕ್ಕಮೇಲೂ 60 ವರ್ಷದ ಬಳಿಕ ಹಳೆಯ ದಿನಗಳ ಮೆಲುಕು ಹಿಂದಿನ ದಿನಗಳನ್ನು ಕೆದಕಿದರೆ ಅವರ ಮುಖದಲ್ಲಿ ಸಂತಸದ ಕೋಲ್ಮಿಂಚು ಹರಿಯುತ್ತದೆ. ಬಹುಶಃ ಅನೇಕರಿಗೆ ಗೊತ್ತಿಲ್ಲ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಒಡನಾಡಿ, ಸ್ವಾತಂತ್ರ್ಯ ಹೋರಾಟಕ್ಕಾಗಿಯೇ ವೀರ ಮರಣವನ್ನಪ್ಪಿದ ಭಗತ್ ಸಿಂಗ್, ರಾಜಗುರು ಮೊದಲಾದವರ ಗುರುಗಳಾಗಿದ್ದವರು ಪಂಡಿತ ಸುಧಾಕರ ಚತುರ್ವೇದಿ. ನಾಲ್ಕೂ ವೇದಗಳಾದ ಋಗ್ವೇದ, ಯಜುರ್ವೇದ,