ನಾಗೇಂದ್ರ ತ್ರಾಸಿ WD ಭಾರತಕ್ಕೆ ಈ ವರ್ಷ ಸ್ವಾತಂತ್ರ್ಯೋತ್ಸವದ ಷಷ್ಟ್ಯಬ್ದ ಸಂಭ್ರಮ. ಒಬ್ಬ ಮನುಷ್ಯನ ಜೀವಿತಾವಧಿಯ 60 ವರ್ಷ ಪೂರ್ಣಗೊಳ್ಳುವುದೆಂದರೆ ಅದು ಸಾರ್ಥಕ ಬದುಕಿನ ಸಂಭ್ರಮ ಎಂದೇ ಪರಿಗಣಿಸಲಾಗುತ್ತದೆ. ಅದೇ ರೀತಿ ಭಾರತ ಬ್ರಿಟಿಷ್ ಗುಲಾಮಗಿರಿಯ ಕಬಂಧಬಾಹುಗಳ ಶೃಂಖಲೆಯನ್ನು ಕಿತ್ತೊಗೆದು, ಸ್ವಾತಂತ್ರ್ಯ ಪಡೆದುಕೊಂಡು 60 ವರ್ಷಗಳಾಗಿವೆ. ಭಾರತದ ಸ್ವಾತಂತ್ರ್ಯ ಹೋರಾಟದ ಗಾಥೆ ಬಹು ವಿಸ್ತಾರವಾದದ್ದು. ಈ ಸಂಧಿಕಾಲದಲ್ಲಿ ಸ್ವಾತಂತ್ರ್ಯ ಗಳಿಸಿ 60 ವರ್ಷಗಳಾದ ಮೇಲೆ ಅದರ ಪುನರಾವಲೋಕನ ಮಾಡಬೇಕಾಗಿದೆ.ಭಾರತಕ್ಕೆ ಸ್ವಾತಂತ್ರ್ಯ