ಸ್ವಾತಂತ್ರ್ಯ ಸಂಗ್ರಾಮದ ವೀರ ತ್ರಿವಿಕ್ರಮರಲ್ಲಿ ಒಬ್ಬರಾದ ಬಟುಕೇಶ್ವರ್ ದತ್ ಹೆಸರು ಅವರ ಒಡನಾಡಿಗಳಾಗಿದ್ದ ಭಗತ್ ಸಿಂಗ್, ಚಂದ್ರ ಶೇಖರ್ ಅಜಾದ್, ರಾಜ್ಗುರು ಅವರ ಹೆಸರುಗಳೊಂದಿಗೆ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಕಾರಣ, 1929ರ ಏಪ್ರಿಲ್ನಲ್ಲಿ ಭಗತ್ ಸಿಂಗ್ ಒಡಗೂಡಿ ಪಂಜಾಬ್ ಅಸೆಂಬ್ಲಿಗೆ ಹಾಕಿದ ಬಾಂಬ್. ಇದಕ್ಕಾಗಿ ಬಂಧನಕ್ಕೊಳಗಾದ ನಂತರ, ದತ್ ಹಾಗೂ ಸಿಂಗ್ ಇಬ್ಬರೂ ಭಾರತೀಯ ರಾಜಕೀಯ ಕೈದಿಗಳ ಹಕ್ಕುಗಳು ಹಾಗೂ ಅವರ ಸ್ಥಿತಿಗತಿಗಳನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವಲ್ಲಿ