ಮಂಜುನಾಥ ಬಂಡಿ ND ಭಾರತದ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿರುವ ಇತಿಹಾಸದ ಪುಟಗಳನ್ನು ತಿರುವಿ ಹಾಕುತ್ತ ಒಂದೊಮ್ಮೆ ಹಿಂದಕ್ಕೆ ಹೆಜ್ಜೆ ಹಾಕಿದರೆ ಸಾಕು, ಅಲ್ಲಿ ನಮಗೆ ಕಾಣಸಿಗುವುದು ಭಾರತೀಯ ಸ್ವಾತಂತ್ರ್ಯ ಹೋರಾಟಗಾರನ ಸಿಂಧೂರವರ್ಣದ ರಕ್ತಸಿಕ್ತ ಪುಟಗಳೆ.ಅದರಲ್ಲಿಯೂ 1919ರ ಏಪ್ರಿಲ್ 13ರಂದು ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ದುರಂತವನ್ನೊಮ್ಮೆ ನೆನೆದರೆ ಸಾಕು ಮೈಜುಮ್ಮೆನ್ನುತ್ತದೆ. ನಮ್ಮ ಹಿರಿಯರು ಮಾಡಿದ ತ್ಯಾಗಕ್ಕೆ ನಮ್ಮ ಕಣ್ಣಲ್ಲಿ ನೀರು ಬರುವುದಿಲ್ಲ, ಬದಲಾಗಿ ರಕ್ತ ಸುರಿಯಲಾರಂಭಿಸುತ್ತದೆ. ಕಾರಣ, ಪಂಜಾಬಿನ ಗವರ್ನರ್