ND ಆರು ದಶಕಗಳ ಅವಧಿಯಲ್ಲಿ ಎಷ್ಟೊಂದು ಇಸಂಗಳು ನಮ್ಮನ್ನು ಕಾಡಿಲ್ಲ. ನ್ಯಾಷನಲಿಸಂನಿಂದ ಹಿಂದುಯಿಸಂವರೆಗೆ ಸಾಗಿದ ದಾರಿ, ಸವೆಸಿದ ದಾರಿಯನ್ನು ಒಮ್ಮೆಯಾದರೂ ತಿರುಗಿ ನೋಡಬೇಕು ಎನ್ನಿಸುತ್ತದೆ. ಬಹುಶಃ ಅದಕ್ಕೂ ಒಂದು ಸುದಿನ ಬೇಕು. ಅದು ಸ್ವಾತಂತ್ರ್ಯೋತ್ಸವ ಆದರೆ ಸರಿಯಾಗುತ್ತದೆ ಏನೊ...ಪ್ರಸಕ್ತ ರಾಜಕೀಯ ಸಿದ್ಧಾಂತಗಳಿಗೂ, ಸ್ವಾತಂತ್ರ್ಯ ಪೂರ್ವ ಇದ್ದ ರಾಜಕೀಯ ಸಿದ್ಧಾಂತಗಳಿಗೂ ವ್ಯತ್ಯಾಸ ಇಲ್ಲವೇ ಇಲ್ಲ ಎಂದರೆ ಅದು ತಪ್ಪು. ಕಾಂಗ್ರೆಸ್ನ ರಾಷ್ಟ್ರೀಯವಾದ, ಪಶ್ಚಿಮ ಬಂಗಾಳದಲ್ಲಿ ಹುಟ್ಟಿ, ಕೇರಳದಲ್ಲಿ ಮೊದಲ ಬಾರಿಗೆ ಫಲ