PTI 60 ಅನ್ನೋದು ಅರಳು ಮರುಳಿನ ಸಂಕೇತ ಅನ್ನುವವರು ಒಂದು ಕಡೆ. ಅರುವತ್ತೆಂಬುದು ಜೀವನೋತ್ಸಾಹದ ರಸ ಘಳಿಗೆ ಎನ್ನುತ್ತಾ ಷಷ್ಟ್ಯಬ್ದಿ ಆಚರಿಸಿಕೊಳ್ಳುತ್ತಿರುವ ಪಂಗಡವೊಂದು ಕಡೆ. ಇದೇ ಮಾದರಿಯ ವಿವಿಧತೆಗಳಲ್ಲಿ ಏಕತೆಯನ್ನು ಸಾಧಿಸುತ್ತಲೇ ಭಾರತವಿಂದು ತನ್ನ ಪುನರ್ಜನ್ಮದ 60ನೇ ವರ್ಷವನ್ನು ಸಡಗರದಿಂದ ಆಚರಿಸಿಕೊಳ್ಳುತ್ತಿದೆ.ಬ್ರಿಟಿಷರ ದಾಸ್ಯದ ಸಂಕೋಲೆ ಕಳಚಿಕೊಂಡು, ಧೈರ್ಯ ಮತ್ತು ತ್ಯಾಗದ ಪ್ರತೀಕವಾದ ಕೇಸರಿ, ಶುಭ್ರತೆಯ ಪ್ರತೀಕವಾಗಿ ಶ್ವೇತವರ್ಣ ಮತ್ತು ಅಭಿವೃದ್ಧಿಯ ಸಂಕೇತ- ಹಸಿರು ಬಣ್ಣಗಳ ಸೀರೆಯುಟ್ಟ ಭಾರತ ಮಾತೆ, ಈ