ಮುಖ್ಯ ಪುಟ > ವಿವಿಧ > ವೆಬ್ ದುನಿಯಾ ವಿಶೇಷ 07 > ಹೊಸ ವರ್ಷ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಸವರುಷಕೊಂದು ಕವನ: ವರ್ತಮಾನ
ರಶ್ಮಿ ಪೈ
PTI
ಎದೆಯ ತಲ್ಪದಲವಿತ
ಕಲ್ಪನೆಗಳ ನಗ್ನಶಿಲೆಯನು ಕೆತ್ತಿ
ಬಿರಿದ ಆಗಸದಿ ಚುಕ್ಕಿಗಳ ಚಿತ್ತಾರ
ಬಣ್ಣ ಜಾಲದಲಿ ಸಿಕ್ಕಿ, ರೂಪ
ತಳೆದ ಕನಸುಗಳ ಕರಡು ರೇಖಾಚಿತ್ರ

ಹೊಸ ದಿನದ ಹೊಂಗಿರಣ
ಪ್ರಸ್ತುತಕೆ ಧಿಕ್ಕರಿಸಿ, ವರ್ತಮಾನದ ನಡುವೆ
ಅಜ್ಜ ನೆಟ್ಟಾಲದ ರೆಂಬೆಗಳ ಸೀಳಿ
ಉದುರುವುವು, ಸ್ವಪ್ನರಶ್ಮಿಗಳ ಸುತ್ತ ಹಾರುವ
ಕ್ಷಣಿಕ ಜೀವನ ಸುಖದ ಪುಟ್ಟ ಹಾತೆಗಳು

ಮಂಜುಮುಸುಕಿದ ಓಣಿಯಲಿ ನಡೆದು
ನಗ್ನ ಪಾದದ ಗುರುತು ಮೂಡಿರೆ
ಇಕ್ಕೆಲದಿ ಇಬ್ಬನಿಯು ಕಿಕ್ಕಿರಿದು ನಗುವಾಗ
ದಳ ಪಕಳೆ ಬಿಚ್ಚಿ, ಸುಮಗಳನು ಮುತ್ತಿಕ್ಕಿ
ಬಿರಿದೆದೆಯನ್ನು ಕೆಣಕಿಸುವ ಭ್ರಮರ ಕೂಟ

ಪೊರೆ ಕಳಚಿ ಧುಮ್ಮಿಕ್ಕುವ ಹೊಂಗನಸ
ಸುಪ್ತಭಾವನೆಗಳಂತೆ, ಬೆಳ್ಮುಗಿಲ ಬಾನಿನಲಿ
ರೆಕ್ಕೆ ಬಿಚ್ಚಿ ಹಾರುವ ಗುಬ್ಬಚ್ಚಿ,
ಬೆಡಗು ಬೆಳಕಿನ ಜೀವ ಬೆನ್ನ ಹತ್ತಿಕ್ಕಿ
ಮೂಡುವುದು ನವವರುಷದ ಕಲ್ಪನೆಯ ವರ್ಣಚಿತ್ರ !!
ಮತ್ತಷ್ಟು
ಈ ವರ್ಷ ಏನೂ ಇಲ್ಲ...ಮುಂದಿನ ವರ್ಷ ನೋಡೋಣ ಎಲ್ಲಾ?
ಅನುಭವ ಜೋಳಿಗೆ ತುಂಬುತ್ತಾ ಹೊಸ ಪಯಣದತ್ತ...
ಹೊಸಋತುಮಾನ ಕನಸು ನನಸು...
ಹೊಸ ವರ್ಷಕ್ಕೆ ತೂಕ ಕಳೆದುಕೊಳ್ಳುವ ಸಂಕಲ್ಪ ಮಾಡಿ!
ಹೊಸ ವರ್ಷದಲ್ಲಿ ನಿಮ್ಮ ಕ್ಯಾಲೆಂಡರ್?
ಹೊಸ ಸಂವತ್ಸರ- ಕಳೆಯಲಿ ದ್ವೇಷ ಮತ್ಸರ