ಮುಖ್ಯ ಪುಟ > ವಿವಿಧ > ವೆಬ್ ದುನಿಯಾ ವಿಶೇಷ 07 > ಅವಲೋಕನ-07
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾನಿಯಾ ಮತ್ತು 2007
PTI
ಎರಡು ತಿಂಗಳುಗಳ ಕಾಲ ಟೆನಿಸ್‌ನಿಂದ ದೂರ ಉಳಿದರೂ ಕೂಡ ಸಾನಿಯಾ ಮಿರ್ಜಾ ಪಾಲಿಗೆ ವರ್ಷ 2007 ಅವಿಸ್ಮರಣೀಯ ಎಂದೇ ಹೇಳಬಹುದು. ತನ್ನ ಟೆನಿಸ್ ಜೀವನದಲ್ಲಿ ಮೊದಲ ಬಾರಿಗೆ ಸಿಂಗಲ್ಸ್‌ನಲ್ಲಿ 27 ಶ್ರೇಯಾಂಕವನ್ನು ತಲುಪಿದ್ದು ಬಹುಶಃ ಈವರೆಗಿನ ಅವರ ಟೆನಿಸ್ ಜೀವನದ ಅಧ್ಯಾಯಗಳಲ್ಲಿ ಪ್ರಮುಖವಾದುದು ಎನ್ನಲಡ್ಡಿಯಿಲ್ಲ.

2007ರ ಪ್ರಾರಂಭದಲ್ಲಿ ಮೊಣಕಾಲು ನೋವಿನಿಂದ ಬಳಲಿ, ಶಸ್ತ್ರಚಿಕಿತ್ಸೆಯ ಬಳಿಕ ಎರಡು ತಿಂಗಳ ವಿಶ್ರಾಂತಿಯ ನಂತರ ಟೆನಿಸ್‌ಗೆ ಮರಳಿದ ಕೂಡಲೇ ಯಶಸ್ಸಿನ ಹಾದಿಯಲ್ಲಿ ಸಾಗಿದ್ದು ಗಮನಿಸಿದರೆ ಪ್ರಾರಂಭದ ದಿನಗಳಲ್ಲಿ ಬಂದ ಆ ಯಶಸ್ಸುಗಳು ಚಣಕಾಲದ ಮಿಂಚಲ್ಲ. ಬದಲಿಗೆ ಕಠಿಣ ಪರಿಶ್ರಮದ ಯಶಸ್ಸುಗಳು ಎಂಬುದನ್ನು ಸಾಬೀತು ಪಡಿಸಿದವು.
PTI


ಹೊಬಾರ್ಟ್ ಮತ್ತು ಪಟ್ಟಾಯಾಗಳಲ್ಲಿ ನಡೆದ ಟೆನಿಸ್ ಟೂರ್ನಿಯ ಸೆಮಿಫೈನಲ್‌ವರೆಗೆ ತಲುಪಿದ ನಂತರ ಮೊಣಕಾಲು ನೋವು ಮಾರ್ಚ್ ತಿಂಗಳಿನಲ್ಲಿ ವಕ್ಕರಿಸಿ ಎರಡು ತಿಂಗಳುಗಳನ್ನು ಸಾನಿಯಾರಿಂದ ಕಿತ್ತು ಕೊಂಡಿತು. ಶಸ್ತ್ರ ಚಿಕಿತ್ಸೆಯ ನಂತರ ವರ್ಷದ ಎರಡನೆ ಇನ್ನಿಂಗ್ಸ್, ಸ್ಟ್ಯಾನ್‌ಫೋರ್ಡ್ ಟೆನಿಸ್ ಟೂರ್ನಿಯ ಮೂಲಕ ಪ್ರಾರಂಭವಾಯಿತು. ಸ್ಟ್ಯಾನ್‌ಫೋರ್ಡ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಸಾನಿಯಾ ಮಿರ್ಜಾ ಫೈನಲ್‌ವರೆಗೆ ತಲುಪಿ ಪರಾಭವಗೊಂಡರು. ಸಾನಿಯಾ ಮಿರ್ಜಾ ಅವರ ವರ್ಷದ ಟೆನಿಸ್ ಆಟದಲ್ಲಿ ಸೋಲಿನ ಕಂತೆಗಳೇ ತುಂಬಿಕೊಂಡಿವೆ. ಆದರೆ ತಮ್ಮ ದೈತ್ಯ ಸಂಹಾರಿಣಿ ಪಾತ್ರವನ್ನು ವರ್ಷದುದ್ದಕ್ಕೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
PTI

ಮಾರ್ಟಿನಾ ಹಿಂಗಿಸ್‌ರಿಂದ ಹಿಡಿದು ಅಗ್ರ 20ರ ಶ್ರೇಯಾಂಕದಲ್ಲಿನ ಐವರು ಟೆನಿಸ್ ಪಟುಗಳಿಗೆ ಸೋಲಿನ ರುಚಿ ತೋರಿಸಿದ್ದಾರೆ. ಅನ್ನಾ ಚಕ್ವತಡ್ಜೆ ಮಾತ್ರ ಸಾನಿಯಾ ಪಾಲಿಗೆ ಕಗ್ಗಂಟಾಗಿ ಉಳಿದಿದ್ದಾರೆ. ವರ್ಷದ ಪ್ರಾರಂಭದಲ್ಲಿ ಹೈದರಾಬಾದ್ ಮೂಲದ ಟೆನಿಸ್ ಆಟಗಾರ್ತಿಯ ಶ್ರೇಯಾಂಕ 66ಕ್ಕೆ ತಲುಪಿತ್ತು. ಅಂತ್ಯದಲ್ಲಿ ಶ್ರೇಯಾಂಕ 27ಕ್ಕೆ ಬಂದು ತಲುಪಿತ್ತು. ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಮೊದಲ ಟೆನಿಸ್ ಆಟಗಾರ್ತಿಯಾಗಿ ಕಾಣಿಸಿಕೊಂಡ ಸಾನಿಯಾ ಮಿರ್ಜಾ ಅನ್ನಾ ಚಕ್ವತಡ್ಜೆ ವಿರುದ್ಧ ನಡೆದ ಮೂರನೆ ಸುತ್ತಿನ ಪಂದ್ಯದಲ್ಲಿ ಸೋಲು ಅನುಭವಿಸಿದರು.
  1 | 2  >> 
ಮತ್ತಷ್ಟು
2007: ಘರ್ಜಿಸಿದ ಬಂಗಾಳದ ಹುಲಿ ಗಂಗೂಲಿ
ಫುಟ್ಬಾಲ್‌ಗೆ ಸವಿನೆನಪಿನ ವರುಷದ ಹರುಷ
ದೇಶವ ಸೆಳೆಯಿತು ಗಮನ- ವೇಣುಗೋಪಾಲ್-ರಾಮದಾಸ್ ಕದನ
ಭಾರತ- ಚೀನಾ ಬಾಂಧವ್ಯ ವೃದ್ಧಿ, ಪರಮಾಣು ಬಾಂಧವ್ಯದತ್ತ ಕೆಂಗಣ್ಣು
ಜಾಗತಿಕ ಶ್ರೀಮಂತಿಕೆಯಲ್ಲಿ ಅಂಬಾನಿಗೊಲಿದಿದ್ದ ಅಗ್ರಪಟ್ಟ
ಭಾರತದ ಆರ್ಥಿಕ ಶಕ್ತಿ ಇದೀಗ ನಾಲ್ಕು ಟ್ರಿಲಿಯನ್ ಡಾಲರ್..!