ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು ಮಂಡಿಸಲಿರುವ ಬಜೆಟ್ನಿಂದ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಕೆಲ ನಿರೀಕ್ಷೆ ಮತ್ತು ರಿಯಾಯಿತಿಗಳನ್ನು ಇಟ್ಟುಕೊಂಡಿವೆ. ಇತ್ತೀಚೆಗಷ್ಟೆ ಸಾರ್ವಜನಿಕ ವಲಯದ ಬ್ಯಾಂಕುಗಳ ಮುಖ್ಯ ಕಾರ್ಯನಿರ್ವಾಹಕರುಗಳು ಪಿ ಚಿದಂಬರಂ ಅವರನ್ನು ಭೇಟಿಯಾಗಿ ಬ್ಯಾಂಕಿಂಗ್ ವಲಯ ಬಜೆಟ್ನಲ್ಲಿ ಕೆಲ ರಿಯಾಯಿತಿಗಳನ್ನು ನೀಡುವಂತೆ ಕೇಳಿಕೊಂಡಿದ್ದಾರೆ.ಬ್ಯಾಂಕ್ ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ನಿವೃತ್ತಿ ವೇತನ ನಿಧಿಗೆ ಬ್ಯಾಂಕ್ನಿಂದ ನೀಡಲಾಗುತ್ತಿರುವ ಮೊತ್ತದಲ್ಲಿ ಕಡಿತ; ಗ್ರ್ಯಾಚುಯಿಟಿ ಫಂಡ್ಗಳಿಗೆ ನೀಡಲಾಗುತ್ತಿರುವ ಬ್ಯಾಂಕ್ ಮೂಲಕ ಸಂದಾಯವಾಗುತ್ತಿರುವ