ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಬಜೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲ್ವೆ ಬಜೆಟ್: ದರ ಏರಿಕೆ ಇಲ್ಲದ ಹೊಸ ರೈಲು
ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಇಂದು ತಮ್ಮ ಐದನೆ ರೈಲ್ವೆ ಬಜೆಟ್‌ನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಭಾರತೀಯ ರೈಲ್ವೆ ಇಲಾಖೆ ಲಾಭದಲ್ಲಿ ಓಡುತ್ತಿರುವುದರಿಂದ ಈ ಬಾರಿಯೂ ಪ್ರಯಾಣ ದರ ಏರಿಕೆ ಇಲ್ಲದ, ಆದಾಯದಲ್ಲಿ ಹೆಚ್ಚಳ, ಹೊಸ ರೈಲುಗಳ ಪರಿಚಯ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ದರದಲ್ಲಿ ರಿಯಾಯಿತಿ. ಹೀಗೆ ಹತ್ತು ಹಲವು ಯೋಜನೆಗಳನ್ನು ಲಾಲೂ ಪ್ರಸಾದ್ ಯಾದವ್ ಅವರು ಪ್ರಕಟಿಸಲಿದ್ದಾರೆಂದು ನಿರೀಕ್ಷಿಸಲಾಗಿದೆ.

ರೈಲ್ವೆ ಇಲಾಖೆಯ ವ್ಯವಸ್ಥೆಯನ್ನು ಮತ್ತಷ್ಟು ಸರಿಪಡಿಸಿದಲ್ಲಿ ಪ್ರಯಾಣ ದರ ಹೆಚ್ಚಳ ಮಾಡದೇ ರೈಲ್ವೆ ಸಾರಿಗೆಯನ್ನು ಲಾಭದಲ್ಲಿ ಮುನ್ನಡೆಸುವುದು ಸಾಧ್ಯ ಎಂದು ಹಿರಿಯ ರೈಲ್ವೆ ಅಧಿಕಾರಿಗಳು ಹೇಳುತ್ತಾರೆ. ಚುನಾವಣೆಗಳು ಸನಿಹದಲ್ಲಿ ಇರುವ ಕಾರಣ ಲಾಲೂ ಪ್ರಸಾದ್ ಯಾದವ್ ಅವರು ಕಬ್ಬಿಣದ ಅದಿರು ಸಾಗಾಣಿಕೆಯ ದರವನ್ನು ಹೆಚ್ಚಿಸಬಹುದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಬ್ಬಿಣದ ಅದಿರಿನ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆ ದಾಖಲಾಗಿರುವ ಕಾರಣ ಅದಿರು ಸಾಗಣೆ ದರವನ್ನು ಹೆಚ್ಚಿಸುವುದಕ್ಕೆ ರೈಲ್ವೆ ಸಚಿವರು ಮುಂದಾಗಬಹುದು.

ತೈಲ ಸಾಗಾಣಿಕೆಯ ದರದಲ್ಲಿ ಲಾಲೂ ಪ್ರಸಾದ್ ಯಾದವ್ ಅವರು ಏರು ಪೇರು ಮಾಡುವ ಸಾಧ್ಯತೆ ಇದೆ. ಆದರೆ ಕೊಳವೆಗಳ ಮೂಲಕ ತೈಲ ಸಾಗಣೆಯ ನಿರ್ವಹಣಾ ವೆಚ್ಚ ಅತ್ಯಂತ ಕಡಿಮೆ ಇರುವ ಕಾರಣ ತೈಲ ಸಾಗಾಣಿಕೆ ದರದಲ್ಲಿ ಹೆಚ್ಚಳ ಮಾಡುವುದು ಲಾಲೂ ಅವರಿಗೆ ಕೊಂಚ ತೊಂದರೆ ನೀಡುತ್ತಿದೆ.

ಲಾಲೂ ಪ್ರಸಾದ್ ಯಾದವ್ ಅವರು ಬಜೆಟ್‌ನಲ್ಲಿ ಈ ಬಾರಿ ವಿನೂತನ ಸರಕು ಸಾಗಾಣಿಕಾ ಯೋಜನೆಗಳು ಮಂಡನೆಯಾಗಬಹುದು. ಮೊದಲನೆಯದಾಗಿ ಒಂದೇ ಸರಕು ಸಾಗಣಿಕೆಯ ವ್ಯಾಗನ್‌ನಲ್ಲಿ ಹಲವಾರು ಸರಕುಗಳನ್ನು ಟ್ರಕ್ಕುಗಳಲ್ಲಿ ತುಂಬುವಂತೆ ತುಂಬಬಹುದು. ಈ ಸರಕು ಯೋಜನೆಗೆ ಅವರು ನೀಡುವ ಉತ್ತರ ಒಂದೇ. ಲಾರಿ ಮಾಲೀಕರು ಸಾಗಣೆಯಾಗುವ ಸರಕಿನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಅದೇ ರೀತಿ ಇದು ಸಹ ಎಂದು ಅವರು ಸಮರ್ಥಿಸಿಕೊಳ್ಳುತ್ತಾರೆ.

ಕಳೆದ ಬಾರಿಯ ಬಜೆಟ್‌ನಲ್ಲಿ ಅಂದಾಜು ಮಾಡಲಾಗಿದ್ದ ಆದಾಯಕ್ಕಿಂತ ಹೆಚ್ಚಿನ ಆದಾಯವನ್ನು ಲಾಲೂ ಪ್ರಸಾದ್ ನಿರೀಕ್ಷಿಸಿದ್ದಾರೆ. ಅಂದಾಜು 21,578 ಕೋಟಿ ರೂಗಳು ಉಳಿತಾಯವಾಗಬಹುದು. ಲಾಭದ ಹೆಚ್ಚಳಕ್ಕೆ ಕೆಲವು ನಿರ್ವಹಣಾ ವೆಚ್ಚಗಳಲ್ಲಿ ಇಳಿಕೆಯಾಗಿರುವುದು ಕಾರಣ ಎನ್ನಲಾಗಿದೆ. ಉದಾ ತೈಲ ವೆಚ್ಚದಲ್ಲಿ ಉಳಿತಾಯ ಮತ್ತು ಆರನೆ ವೇತನ ಆಯೋಗದ ವರದಿ ಅಂತಿಮವಾಗಿಲ್ಲದ ಕಾರಣ ವೇತನದ ಬಾಬ್ತಿನಲ್ಲಿ ಲಾಲೂ ಪ್ರಸಾದ್ ಯಾದವ್ ಅವರು 3 ಸಾವಿರ ಕೋಟಿ ರೂಗಳ ಉಳಿತಾಯ ಮಾಡಬಹುದು.

ಆರನೆ ವೇತನ ಆಯೋಗದ ವರದಿ ಜಾರಿಗೆ ಬಂದಲ್ಲಿ 2008-9ರ ಹಣಕಾಸು ವರ್ಷದಲ್ಲಿ ರೈಲ್ವೆ ಇಲಾಖೆ ಅಂದಾಜು 9 ಸಾವಿರ ಕೋಟಿ ರೂಗಳನ್ನು ವೇತನ ಬಾಬ್ತಿನಲ್ಲಿ ತೆಗೆದಿರಿಸಬೇಕಾಗಬಹುದು. ಆಯೋಗದ ವರದಿ ಜಾರಿಯಾದಲ್ಲಿ ಲಾಲೂ ಪ್ರಸಾದ್ ಯಾದವ್ ಅವರು ಡಿವಿಡೆಂಡ್ ಮೂಲಕ ಉದ್ಯೋಗಿಗಳಿಗೆ ಬಾಕಿ ವೇತನ ಪಾವತಿಗೆ ಕ್ರಮ ತೆಗೆದುಕೊಳ್ಳಬಹುದು ಎಂಬುದು ನಿರೀಕ್ಷೆ.
ಮತ್ತಷ್ಟು
ಬಜೆಟ್‌: ಕೃಷಿಕರಿಗೆ ನೆಮ್ಮದಿ ಪ್ರಧಾನಿ ಸುಳಿವು
ರೈಲ್ವೇ ಬಜೆಟ್ ಆಗಲಿದೆ 'ಸಂತೃಪ್ತಿಯ ಬುಟ್ಟಿ'
ರಾಷ್ಟ್ರಪತಿಯಿಂದ ಚುನಾವಣಾ ಭಾಷಣ ಮಾಡಿಸಿದ ಸರಕಾರ!
ಬಿರುಗಾಳಿ ಎಬ್ಬಿಸಲಿರುವ ಬಜೆಟ್ ಅಧಿವೇಶನ
ಬಜೆಟ್‌ನಲ್ಲಿ ರೈತರಿಗೆ ಹೆಚ್ಚಿನ ಕಾಳಜಿ ಇರಲಿ
ಬಜೆಟ್‌ನಿಂದ ಬ್ಯಾಂಕಿಂಗ್ ವಲಯದ ನಿರೀಕ್ಷೆ ಏನು ?