ಲೋಕಸಭೆಯಲ್ಲಿಂದು ತಮ್ಮ ಐದನೆ ಹಾಗೂ ಯುಪಿಎ ಸರಕಾರದ ಅಂತಿಮ ಬಜೆಟ್‌ನ್ನು ಮಂಡಿಸಿದ ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರು 2007-08 ರ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆ 25 ಸಾವಿರ ಕೋಟಿ ರೂ ಲಾಭ ಗಳಿಸಿದ್ದು, ಅದೇ ಹಣಕಾಸು ವರ್ಷದಲ್ಲಿ 49, 49250 ಕೋಟಿ ರೂಗಳನ್ನು ರೈಲ್ವೆಯ ನೂತನ ಯೋಜನೆಗಳಿಗೆ ವೆಚ್ಚ ಮಾಡಿದೆ. ಮೂರನೆ ವರ್ಷವೂ ಸತತವಾಗಿ ಲಾಭದತ್ತ ಮುನ್ನುಗ್ಗುತ್ತಿರುವುದಕ್ಕೆ ಕೇಂದ್ರ ಸರಕಾರದ ನೀತಿಗಳೇ ಕಾರಣ ಎಂದು ಈ ಸಂದರ್ಭದಲ್ಲಿ ಹೇಳಿದರು.
ರೈಲ್ವೆಯ ಆದಾಯದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವ ಸರಕು ಸಾಗಾಣಿಕೆಯಲ್ಲಿ ನಿರೀಕ್ಷಿತ ಗುರಿಯನ್ನು ಭಾರತೀಯ ರೈಲ್ವೆ ಸಾಧಿಸಿದೆ. ಕಳೆದ ಹಣಕಾಸು ವರ್ಷದಲ್ಲಿ 790 ಪೆ ಲೋಡ್ ಗುರಿಯನ್ನು ಮುಟ್ಟಲಾಗಿದೆ. ಸರಕು ಸಾಗಾಣಿಕೆಯೊಂದರಲ್ಲಿ 14 ಸಾವಿರ ರೂಗಳ ಲಾಭವನ್ನು ರೈಲ್ವೆ ಮಾಡಿದ್ದು. ರಜಾ ದಿನ ಮತ್ತು ಪ್ರಮುಖ ದಿನಗಳ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲೂ ಹೆಚ್ಚಳವಾಗಿರುವುದರಿಂದ ಲಾಭದ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 5 ಸಾವಿರ ಕೋಟಿ ರೂಗಳ ಏರಿಕೆಯಾಗಿದೆ.
|