ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಬಜೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐದು ವರ್ಷದಲ್ಲಿ 68 ಸಾವಿರ ಕೋ.ರೂ ಲಾಭ
ಯುಪಿಎ ಸರಕಾರದ ಐದನೆ ರೈಲ್ವೆ ಬಜೆಟ್ ಮಂಡಿಸಿದ ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಕಳೆದ ಐದು ವರ್ಷಗಳ ಅವಧಿಯಲ್ಲಿ ಬಾರತೀಯ ರೈಲ್ವೆ 68,778 ಕೋಟಿ ರೂಗಳ ಲಾಭಗಳಿಸಿದ್ದು. ಈ ಐದು ವರ್ಷಗಳ ಅವಧಿಯಲ್ಲಿ ಸರಕಾರಕ್ಕೆ ಡಿವಿಡೆಂಡ್ ರೂಪದಲ್ಲಿ 15 ಸಾವಿರ ಕೋಟಿ ರೂ ಪಾವತಿ ಮಾಡಿದೆ. 2007-08ರ ಹಣಕಾಸು ವರ್ಷದಲ್ಲಿ ರೈಲ್ವೆಯ ಲಾಭಾಂಶ 25 ಸಾವಿರ ಕೋಟಿ ರೂಗೆ ಏರಿದೆ.

ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಮಂಡಿಸಿದ ರೈಲ್ವೆ ಬಜೆಟ್ಟಿನ ಕೆಲ ಪ್ರಮುಖ ಅಂಶಗಳು ಈ ಕೆಳಗಿನಂತೆ ಇದೆ.
*ಮಿಗತೆ ಹಣ 25.000 ಸಾವಿರ ಕೋಟಿ ರೂ
*ಅಧಿ ಸರಕು ಸಾಗಣೆಯಿಂದ ಗಳಿಸಿದ ಮೊತ್ತ 20,000 ಸಾವಿರ ಕೋಟಿ ರೂ
*ಬಾಕಿ ಇರುವ ರೈಲ್ವೆ ನಿಧಿ 2,000 ಕೋಟಿ ರೂ
*11. ಸಾವಿರ ಕೋಟಿ ರೂಗಳಿಂದ 33 ಸಾವಿರ ಕೋಟಿ ರೂಗಳಿಗೆ ರೈಲ್ವೆ ಯೋಜನಾ ವೆಚ್ಚದಲ್ಲಿ ಹೆಚ್ಚಳ
*ನೂತನ ರೈಲ್ವೆ ಯೋಜನೆಗಳಿಗೆ 49.250 ಕೋಟಿ ರೂಗಳನ್ನು ವೆಚ್ಚ ಮಾಡಲಾಗಿದೆ.
ಸರಕು ಸಾಗಾಣಿಕೆ
*790 ಟನ್ ಪೆಲೋಡ್ ಗುರಿ ತಲುಪಲಾಗಿದೆ.

*ವ್ಯಾಗನ್ ಸರಕು ಸಾಗಾಣಿಕಾ ಸೇವೆಯ ಮೂಲಕ 233 ಕೋಟಿ ರೂ ಲಾಭ.

*3000 ಹೊಸ ಸರಕು ಸಾಗಾಣಿಕಾ ಬೋಗಿಗಳು

*ಶಿಪ್ಪಿಂಗ್ ಮತ್ತು ರಸ್ತೆ ಸಾರಿಗೆ ಕಂಪನಿಗಳು ವಿಶೇಷ ಸರಕು ಸಾಗಾಣಿಕೆ ರೈಲು ಓಡಿಸುವುದಕ್ಕೆ ಒಪ್ಪಿಗೆ ನೀಡಿವೆ.
*ಸರಕು ಸಾಗಾಣಿಕೆಯಲ್ಲಿ ಶೇ 10ರಷ್ಟು ವೃದ್ದಿ
200809ರ ಹಣಕಾಸು ಬಜೆಟ್‌‍ನಲ್ಲಿ ಸರಕು ಸಾಗಾಣಿಕೆ ಆದಾಯದ ಗುರಿ 44 ಸಾವಿರ ಕೋಟಿ ರೂ ನಿಗದಿ.
*ವಿಶೇಷ ಸರಕು ಸಾಗಾಣಿಕೆಯಲ್ಲಿ ಶೇ 160ರಷ್ಟು ಹೆಚ್ಚಳ ಗುರಿ ನಿಗದಿ
2008-09ರ ಯೋಜನೆಗಳು
* ಮುಂಬರುವ ಎರಡು ವರ್ಷಗಳಲ್ಲಿ ರೈಲುಗಳ ಆನ್‌ಲೈನ್ ನಿಯಂತ್ರಣ ವ್ಯವಸ್ಥೆ
* ರಾಜಧಾನಿ ಮತ್ತು ಶತಾಬ್ಧಿ ಏಕ್ಸಪ್ರೆಸ್ ರೈಲುಗಳಿಗೆ ಎಲ್ಎಚ್‌ಬಿ ಬೋಗಿಗಳು
* 2010ರ ನಂತರ ಎಲ್ಲ ರೈಲು ಬೋಗಿಗಳು ಸ್ಟೇನ್ ಲೆಸ್ ಸ್ಟೀಲ್‌ ಉಪಯೋಗಿಸಿ ನಿರ್ಮಾಣ ಮಾಡಲಾಗುವುದು.
* ದೇಶದ ಅತಿ ದೊಡ್ಡ 50 ರೈಲು ನಿಲ್ದಾಣಗಳಲ್ಲಿ ಸ್ವಯಂಚಾಲಿತ ಮೆಟ್ಟಿಲುಗಳ ಸೌಲಭ್ಯ.
ಸೌಕರ್ಯಗಳು
* ಹೊಸ ಕಾಲ್ ಸೆಂಟರ್‌ಗಳ ಅಳವಡಿಕೆ.
* ಎ ಮತ್ತು ಬಿ ವರ್ಗದ ರೈಲು ನಿಲ್ದಾಣಗಳಲ್ಲಿ ಎಲ್ಇಡಿ ಡಿಸ್ಪ್ಲೆ ವ್ಯವಸ್ಥೆ.
* ಮಾರ್ಚ್ 09ರೊಳಗೆ ಮೇಲ್, ಏಕ್ಸ್‌ಪ್ರೆಸ್ ರೈಲುಗಳಲ್ಲಿ ಮುಂಬರುವ ರೈಲು ನಿಲ್ದಾಣದ ಮಾಹಿತಿಯನ್ನು ನೀಡುವ ವ್ಯವಸ್ಥೆ ಅಳವಡಿಸಲಾಗುವುದು.
ಮುಂಬೈ ಲೋಕಲ್ ರೈಲುಗಳಿಗೆ ಜಾರಿಗೆ ತರಲಾಗಿದ್ದ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ದೇಶದ ಇತರ ರೈಲ್ವೆ ವಲಯಗಳಲ್ಲಿ ಜಾರಿಗೆ ತರಲಾಗುವುದು.
ಮತ್ತಷ್ಟು
ವೇಗ ಪಡೆದುಕೊಂಡ ಲಾಲೂರ ರೈಲಿನ ಲಾಭ
ಲಾಭದ ಲೆಕ್ಕಾಚಾರಕ್ಕೆ ಕಡಿತವೇ ಮದ್ದು
ರೈಲ್ವೆ ಬಜೆಟ್: ದರ ಏರಿಕೆ ಇಲ್ಲದ ಹೊಸ ರೈಲು
ಬಜೆಟ್‌: ಕೃಷಿಕರಿಗೆ ನೆಮ್ಮದಿ ಪ್ರಧಾನಿ ಸುಳಿವು
ರೈಲ್ವೇ ಬಜೆಟ್ ಆಗಲಿದೆ 'ಸಂತೃಪ್ತಿಯ ಬುಟ್ಟಿ'
ರಾಷ್ಟ್ರಪತಿಯಿಂದ ಚುನಾವಣಾ ಭಾಷಣ ಮಾಡಿಸಿದ ಸರಕಾರ!