ರೈಲ್ವೇ ಸಚಿವ ಲಾಲು ಪ್ರಸಾದ್ ಅವರು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿರುವ ತಮ್ಮ ಐದನೇ ಬಜೆಟಿನಲ್ಲಿ ಪ್ರಯಾಣ ದರದಲ್ಲಿ ಸಾಕಷ್ಟು ಕಡಿತಗೊಳಿಸಿದ್ದು, ಜನಸಾಮಾನ್ಯರನ್ನು ಸಂತೃಪ್ತಿಗೊಳಿಸುವತ್ತ ಪ್ರಮುಖ ಹೆಜ್ಜೆ ಇಟ್ಟಿದ್ದಾರೆ.
ಸ್ಲೀಪರ್ ದರ್ಜೆಯ ಪ್ರಯಾಣ ದರವನ್ನು ಶೇ.5ರಷ್ಟು ಇಳಿಸಲಾಗಿದ್ದು, ಎಸಿ I ದರ್ಜೆಯಲ್ಲಿ ಶೇ.7, ಎಸಿ II ದರ್ಜೆಯಲ್ಲಿ ಶೇ.4 ಹಾಗೂ ಎಸಿ III ದರ್ಜೆಯ ಪ್ರಯಾಣ ದರವನ್ನು ಶೇ.3ರಷ್ಟು ಇಳಿಸಿದ್ದಾರೆ.
ಇದಲ್ಲದೆ ಹಿರಿಯ ಮಹಿಳಾ ಪ್ರಯಾಣಿಕರ ಪ್ರಯಾಣ ದರವನ್ನು ಕೂಡ ಶೇ.30ರಿಂದ ಶೇ.50ರಷ್ಟು ಕಡಿತಗೊಳಿಸಿ ಮಹಿಳಾ ಸಮುದಾಯದ ಮನ ಗೆಲ್ಲುವ ಪ್ರಯತ್ನ ಮಾಡಿದ್ದಾರೆ.
|