ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಬಜೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲ್ವೆ ಬಜೆಟ್: ದಾಖಲೆ ಲಾಭ, ಇಳಿಕೆಯಾದ ಪ್ರಯಾಣ ಮತ್ತು ಸರಕು ದರ
ಬಜೆಟ್ ಮಂಡನೆಗೆ ಮುನ್ನವೇ ಈ ಬಾರಿಯ ರೈಲ್ವೆ ಬಜೆಟ್ ಜನಪರವಾಗಲಿದೆ ಎಂದು ಹೇಳಿದ್ದ ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಲಾಭಾಂಶ ವಿತರಣೆಗೆ ಮುನ್ನ 2007-8 ರ ಹಣಕಾಸು ವರ್ಷದಲ್ಲಿ 25 ಸಾವಿರ ಕೋಟಿ ರೂಗಳ ನಿವ್ವಳ ಲಾಭಗಳಿಸಿದೆ. ದಕ್ಷ, ಲಾಭದಾಯಕ ಮತ್ತು ಜನರಿಗೆ ಹೊರೆಯಾಗದ ಪ್ರಯಾಣ ಸೌಕರ್ಯವನ್ನು ಒದಗಿಸುವುದು ಭಾರತೀಯ ರೈಲ್ವೆಯ ಉದ್ದೇಶ ಎಂದು ಲೋಕಸಭೆಯಲ್ಲಿ 2008-09ರ ರೈಲ್ವೆ ಬಜೆಟ್ ಮಂಡಿಸುತ್ತ ಸ್ಪಷ್ಟಪಡಿಸಿದರು.

ಲೋಕಸಭೆಯಲ್ಲಿ 25 ಸಾವಿರ ಕೋಟಿ ರೂ ಲಾಭವನ್ನು ಪ್ರಕಟಸಿದ ಲಾಲೂ ಪ್ರಸಾದ್ ಯಾದವ್ ಅವರು ಪ್ರಯಾಣಿಕರಿಗೆ ಹೊಣೆಯಾಗದ ರೀತಿಯಲ್ಲಿ ಪ್ರಯಾಣದರಗಳಲ್ಲಿ ಏರಿಕೆ ಮಾಡಿಲ್ಲ. ಮತ್ತು ಆಯ್ದ ಕೆಲವೇ ವಸ್ತುಗಳ ಸರಕು ಸಾಗಾಣಿಕೆಯ ಮೇಲೆ ಅಧಿ ಶುಲ್ಕವನ್ನು ವಿಧಿಸುವ ಮೂಲಕ ಮುಂಬರುವ ವರ್ಷದಲ್ಲಿ ಆದಾಯ ಹೆಚ್ಚಳಕ್ಕೆ ಕ್ರಮ ತೆಗೆದುಕೊಂಡಿದ್ದಾರೆ.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರೈಲ್ವೆಯ ಯೋಜನಾ ವೆಚ್ಚವು 11 ಸಾವಿರ ಕೋಟಿ ರೂಗಳಿಂದ 30 ಸಾವಿರ ಕೋಟಿ ರೂಗಳಿಗೆ ಏರಿದೆ.

ರೈಲ್ವೆ ಬೋಗಿ ಮತ್ತು ನಿಲ್ದಾಣಗಳಲ್ಲಿ ಸ್ವಚ್ಚತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವೃತ್ತಿಪರ ಸಂಸ್ಥೆಗಳಿಗೆ ಪ್ರಾಯೋಗಿಕವಾಗಿ ಕೆಲಸ ನೀಡಲಾಗುವುದು.

ನಾಲ್ಕು ವರ್ಷಗಳ ಅವಧಿಯಲ್ಲಿ ರೈಲ್ವೆಯ ಲಾಭವು 68,778 ಕೋಟಿ ರೂಗಳನ್ನು ತಲುಪಿದೆ. ನಾಲ್ಕು ವರ್ಷಗಳ ಹಿಂದಿನಿಂದ ಮಾಡಿದ ಪ್ರಯತ್ನ ಇಂದು ಫಲ ನೀಡುತ್ತಿದೆ ಎಂದು ಲೋಕಸಭೆಯಲ್ಲಿ ಹೇಳಿದರು.

ವಿಶಿಷ್ಟ ಶೈಲಿಯ ಹಾಸ್ಯ ಬೆರೆತ ಬಜೆಟ್ ಭಾಷಣವನ್ನು ಮುಂದುವರಿಸಿದ ಲಾಲೂ ಪ್ರಸಾದ್ ಯಾದವ್ ಅವರು ನಾನು ಪಟ್ಟಿರುವ ಕಠಿಣ ಶ್ರಮವನ್ನು ಇಂದು ಜಗತ್ತು ಅಚ್ಚರಿಯಿಂದ ನೋಡುತ್ತಿದೆ. ಎಂದು ಬಿಹಾರಿ ಶೈಲಿಯ ಹಿಂದಿಯಲ್ಲಿ 2008-09 ರ ವರ್ಷದಲ್ಲಿ ರೈಲ್ವೆ ಇಲಾಖೆ ಹಾಕಿಕೊಂಡಿರುವ ಯೋಜನೆಗಳ ಮಾಹಿತಿ ನೀಡಿದರು.
ಅರ್ಧಕ್ಕೂ ಹೆಚ್ಚು ಎ ವರ್ಗದ ರೈಲು ನಿಲ್ದಾಣಗಳಲ್ಲಿ ಸ್ವಯಂ ಚಾಲಿತ ಮೆಟ್ಟಿಲುಗಳ ವ್ಯವಸ್ಥೆ, ಎಲ್ಲ ಪ್ರಯಾಣಿಕ ಬೋಗಿಗಳನ್ನು ಸ್ಟೇನ್ ಲೆಸ್ ಸ್ಟೀಲ್‌ಗಳಲ್ಲಿ ನಿರ್ಮಿಸುವ ಮೂಲಕ ಬೋಗಿಗಳ ನಿರ್ಮಾಣ ಮತ್ತು ನಿರ್ವಹಣಾ ವೆಚ್ಚವನ್ನು ಕಡಿತಗೊಳಿಸುವುದು. ಸರಕು ಸಾಗಾಣಿಕೆಯನ್ನು 650 ಮಿಲಿಯನ್ ಟನ್‍‌ಗಳಿಂದ 2011ರ ಹೊತ್ತಿಗೆ 1100 ಮಿಲಿಯನ್ ಟನ್‌ವರೆಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.

ಕಡಿಮೆ ದರದ ವಿಮಾನ ಸೇವೆಯ ಪೈಪೋಟಿಯನ್ನು ಎದುರಿಸುವುದಕ್ಕೆ ರಾಜಧಾನಿ ಮತ್ತು ಶತಾಬ್ಧಿ ರೈಲುಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬೋಗಿಗಳ ಸ್ವಚ್ಚತೆ ರೈಲು ಚಲಿಸುತ್ತಿರುವ ಸಮಯದಲ್ಲಿ ಮಾಡಲಾಗುವುದು.

ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ದ್ವಿತೀಯ ದರ್ಜೆ ಪ್ರಯಾಣ ದರದಲ್ಲಿ ಶೇ 5ರಷ್ಟು ಕಡಿತಗೊಳಿಸಲಾಗಿದೆ. ಎಸಿ ಮೊದಲ ದರ್ಜೆ ಶೇ 7 ಮತ್ತು ಎಸಿ ಟು ಟೈರ್ ಪ್ರಯಾಣ ದರದಲ್ಲಿ ಶೇ ನಾಲ್ಕರಷ್ಟು ಇಳಿಕೆಯಾಗಿದೆ.

ಪೆಟ್ರೋಲ್ ಮತ್ತು ಡಿಸೆಲ್ ಸಾಗಾಣಿಕೆಯ ಮೇಲಿನ ದರದಲ್ಲಿ ಶೇ 5 ರಷ್ಟು ಇಳಿಕೆ ಮಾಡಲಾಗಿದೆ. ಈಶಾನ್ಯ ರಾಜ್ಯಗಳಿಗೆ ಸಾಗಿಸುವ ಸರಕುಗಳ ಮೇಲಿನ ದರ ಶೇ 6ರಷ್ಟು ಕಡಿತಗೊಂಡಿದೆ.

ಹತ್ತು ಗರೀಬ್ ರಥ್‌ ರೈಲುಗಳ ಪರಿಚಯ, ಒಟ್ಟು 53 ರೈಲುಗಳು ಎಪ್ರಿಲ್ ಒಂದರಿಂದ ಸಂಚರಿಸಲಿವೆ. ಪದವಿ ಶಿಕ್ಷಣದವರೆಗೆ ವ್ಯಾಸಂಗ್ ಮಾಡುತ್ತಿರುವ ಬಾಲಕಿಯರಿಗೆ ಉಚಿತ ತಿಂಗಳ ಸಿಜನ್ ಟಿಕೆಟ್. ಏಡ್ಸ್ ರೋಗಿಗಳಿಗೆ ಶೇ 50 ರಷ್ಟು ಪ್ರಯಾಣದರದಲ್ಲಿ ರಿಯಾಯಿತಿ. ಡಿ ದರ್ಜೆ ನೌಕರರ ನೇಮಕಾತಿ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ಪೂರ್ಣಗೊಳಿಸುವುದು.
ಮತ್ತಷ್ಟು
ದ್ವಿತೀಯ ದರ್ಜೆ, ಎಸಿ, ಪ್ರಥಮ ದರ್ಜೆ ಯಾನ ದರ ಕಡಿತ
ಐದು ವರ್ಷದಲ್ಲಿ 68 ಸಾವಿರ ಕೋ.ರೂ ಲಾಭ
ವೇಗ ಪಡೆದುಕೊಂಡ ಲಾಲೂರ ರೈಲಿನ ಲಾಭ
ಲಾಭದ ಲೆಕ್ಕಾಚಾರಕ್ಕೆ ಕಡಿತವೇ ಮದ್ದು
ರೈಲ್ವೆ ಬಜೆಟ್: ದರ ಏರಿಕೆ ಇಲ್ಲದ ಹೊಸ ರೈಲು
ಬಜೆಟ್‌: ಕೃಷಿಕರಿಗೆ ನೆಮ್ಮದಿ ಪ್ರಧಾನಿ ಸುಳಿವು