ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಬಜೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರ್ವರ ಓಲೈಕೆ ಬಜೆಟ್‌ಗೆ ಕ್ಷಣಗಣನೆ
PTI
ರೈಲ್ವೆ ಸಚಿವ ಲಾಲೂಪ್ರಸಾದ್ ಯಾದವ್ ಅವರು ಜನಪ್ರಿಯತೆಯ ಲೇಪನದ ಬಜೆಟ್ ಮಂಡಿಸಿರುವಂತೆ, ಹಣಕಾಸು ಸಚಿವ ಚಿದಂಬರಂ ಅವರೂ ಸಹ ಎಲ್ಲವರ್ಗದವರಿಗೂ ಸಿಹಿ ಅನ್ನಿಸುವ ಬಜೆಟ್ ಮಂಡಿಸಲಿದ್ದಾರೆ ಎಂಬುದು ಸಾರ್ವತ್ರಿಕ ನಿರೀಕ್ಷೆ.

ಆರ್ಥಶಾಸ್ತ್ರ ತಜ್ಞರೂ ಆಗಿರುವ ಚಿದಂಬರಂ, ಯುಪಿಎ ಸರಕಾರ ಮಂಡಿಸಲಿರುವ ಕೊನೆಯ ಬಜೆಟ್ ಇದಾಗಿರುವ ಕಾರಣ, ವೈಯಕ್ತಿಕ ತೆರಿಗೆದಾರರಿಂದ ಹಿಡಿದು, ಕಾರ್ಪೋರೆಟ್ ವಲಯದ ತನಕ ಎಲ್ಲರಿಗೂ ಒಂದಿಷ್ಟು ನೆಮ್ಮದಿ ನೀಡುವ ಬಜೆಟ್ ನೀಡಲಿದ್ದಾರೆ ಎಂಬುದು ವ್ಯಾಪಕ ನಿರೀಕ್ಷೆ.

ವೃತ್ತಿಯಲ್ಲಿ ವಕೀರಲರಾಗಿರುವ ಚಿದು, ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದವರು. ಏಳು ರಾಜ್ಯಗಳ ವಿಧಾನ ಸಭೆ, ಹಾಗೂ ಲೋಕಸಭಾ ಚುವಾವಣೆಯು ಬಜೆಟ್‌ನಲ್ಲಿ ಪ್ರತಿಫಲಿಸಬಹುದಾಗಿದೆ.

ಈ ಬಜೆಟ್ ಮತದಾರರ ವಿಶ್ವಾಸ ಗಳಿಸಲು ಸರಕಾರಕ್ಕಿರುವ ಕೊನೆಯ ಅವಕಾಶವಾಗಿದೆ. ಇದಲ್ಲದೆ, ರೈತರ ಆತ್ಮಹತ್ಯೆಗಳು ಹೆಚ್ಚುತ್ತಿರುವುದು ಮತ್ತು ದಿನೇದಿನೇ ರೈತರ ಸ್ಥಿತಿ ಅಧೋಗತಿಗೆ ಇಳಿಯುತ್ತಿರುವ ಕಾರಣ ಪ್ರಸಕ್ತ ಸರಕಾರ ತೀವ್ರ ವಿರೋಧವನ್ನು ಎದುರಿಸುತ್ತಿದೆ. ಈ ಎಲ್ಲವನ್ನೂ ಚಿದಂಬರಂ ಹೇಗೆ ಸಮತೋಲಿಸುತ್ತಾರೆ ಎಂಬುದು ಇನ್ನು ಕೆಲವೇ ಹೊತ್ತಿನಲ್ಲಿ ಬಿತ್ತರವಾಗಲಿದೆ.
ಮತ್ತಷ್ಟು
ಸರದಿ ಸಾಲು ಇನ್ನು ಮೇಲಿಲ್ಲ: ಲಾಲು ಭರವಸೆ
ಲಾಲೂ ಪ್ರಸಾದ್ ಓಡಿಸಲಿರುವ ಹೊಸ ರೈಲುಗಳ ಪಟ್ಟಿ
ರೈಲ್ವೆ ಬಜೆಟ್: ದಾಖಲೆ ಲಾಭ, ಇಳಿಕೆಯಾದ ಪ್ರಯಾಣ ಮತ್ತು ಸರಕು ದರ
ದ್ವಿತೀಯ ದರ್ಜೆ, ಎಸಿ, ಪ್ರಥಮ ದರ್ಜೆ ಯಾನ ದರ ಕಡಿತ
ಐದು ವರ್ಷದಲ್ಲಿ 68 ಸಾವಿರ ಕೋ.ರೂ ಲಾಭ
ವೇಗ ಪಡೆದುಕೊಂಡ ಲಾಲೂರ ರೈಲಿನ ಲಾಭ