ಕೇಂದ್ರ ಸರಕಾರವು ಮಂಡಿಸಿರುವ 2008-09ರ ಸಾಲಿನ ಮುಂಗಡ ಪತ್ರದಲ್ಲಿ ಚುನಾವಣೆಯು ಫಳಫಳನೆ ಪ್ರತಿಫಲಿಸುತ್ತಿದ್ದು, ಎಲ್ಲಾ ವರ್ಗಗಳನ್ನು ಓಲೈಸಲು ಹರಸಾಹಸ ಮಾಡಿದೆ. ಬಡಜನತೆ, ರೈತರು, ಪರಿಶಿಷ್ಟವರ್ಗ, ಪಂಗಡ ಹಾಗೂ ಅಲ್ಪಸಂಖ್ಯಾತರಿಗೆ ಮನಸ್ಸಿಗೆ ಮುದ ನೀಡಲು ಪ್ರಯತ್ನಿಸಿದೆ.
ಆದಾಯ ತೆರಿಗೆದಾರರ ತೆರಿಗೆ ಪಾವತಿ ಮಿತಿಯಲ್ಲಿ ಹೆಚ್ಚಳ ಮಾಡಲಾಗಿದ್ದು, 1,50,000ಕ್ಕೇರಿಸಿದೆ. ಮಹಿಳೆಯರ ಆದಾಯ ಮಿತಿಯನ್ನು 1,80,000ಕ್ಕೇರಿಸಲಾಗಿದ್ದರೆ, ಹಿರಿಯ ನಾಗರಿಕರ ಆದಾಯ ಮಿತಿಯನ್ನು 2,25,000ಕ್ಕೇರಿಸಿದೆ. ಆದರೆ ಕಾರ್ಪೋರೆಟ್ ತೆರಿಗೆಯ ರಚನೆಯು ಹೇಗಿದೆಯೋ ಹಾಗೆಯೇ ಮುಂದುವರಿಯಲಿದೆ.
ಹೊಸ ತೆರಿಗೆ ಮಿತಿ ಹೀಗಿದೆ ಕಳೆದ ಸಾಲಿಗಿಂತ ಈ ಸಾಲಿಗೆ ತೆರಿಗೆ ಮಿತಿಯನ್ನು 1,10,000ದಿಂದ 1,50,000 ರೂಪಾಯಿಗಳಿಗೇರಿಸಲಾಗಿದೆ. ಮಹಿಳೆಯರ ಆದಾಯ ಮಿತಿ 1,80,000ಕ್ಕೇರಿದೆ. ಹಿರಿಯ ನಾಯಕರು ಆದಾಯ ಮಿತಿ 1,95,000ದಿಂದ 2,25,000 ಕ್ಕೇರಿದೆ.
ಹೊಸ ತೆರಿಗೆ ಹಂತಗಳು *1.5 ಲಕ್ಷದಿಂದ 3 ಲಕ್ಷದ ತನಕ ಶೇ 10ರಷ್ಟು ತೆರಿಗೆ *3 ಲಕ್ಷದಿಂದ 5 ಲಕ್ಷದ ತನಕ ಶೇ20 10ರಷ್ಟು ತೆರಿಗೆ *5 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ಶೇ30 10ರಷ್ಟು ತೆರಿಗೆ
ಕಾರ್ಪೋರೆಟ್ ತೆರಿಗೆ *ಕಾರ್ಪೋರೆಟ್ ತೆರಿಗೆಯಲ್ಲಿ ಬದಲಾವಣೆ ಇಲ್ಲ *ಸರ್‌ಚಾರ್ಜ್‌ಗಳಲ್ಲಿಯೂ ಬದಲಾವಣೆ ಇಲ್ಲ
ತೆರಿಗೆಗಳು *ತೆರಿಗೆ ಸಂಗ್ರಹಗಳ ನಾಟಕೀಯ ಏರಿಕೆ ಕಂಡಿದೆ
*ಸುಧಾರಿತ ಹಾಗೂ ಸ್ಥಿರ ದರದಗಳಿಂದ ಹೆಚ್ಚು ಸಂಗ್ರಹ
*ತೆರಿಗೆಯ ಒಟ್ಟು ರಾಷ್ಟ್ರೀಯ ಉತ್ಪನ್ನವು 2003ರಲ್ಲಿ ಶೇ.9.2 ಇದ್ದುದು ಈ ವರ್ಷಕ್ಕೆ ಶೇ12.5ರಷ್ಟು ಏರಿದೆ.
*ಹೆಚ್ಚಿದ ಅಭಿವೃದ್ಧಿ ದರ, ತೆರಿಗೆ ಪಾವತಿದಾರರ ಮನೋಭಾವದ ಬದಲಾವಣೆ ಮತ್ತು ತಾಂತ್ರಿಕತೆಯಿಂದಾಗಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ.
ಪರೋಕ್ಷ ತೆರಿಗೆ *ಕಸ್ಟಂ ಸುಂಕದಲ್ಲಿ ಬದಲಾವಣೆ ಇಲ್ಲ
|