|
ಬಜೆಟ್ 2008-09 ಮುಖ್ಯಾಂಶಗಳು * ನೇರ ಡಿವಿಡೆಂಡ್ ತೆರಿಗೆಯಲ್ಲಿ (ಶೇ.15) ಬದಲಾವಣೆಯಿಲ್ಲ
* ಎಲ್ಲಾ ಫಾರ್ಮಾ ಸರಕುಗಳ ಮೇಲೆ ಅಬಕಾರಿ ಸುಂಕ ರಿಯಾಯಿತಿ ಶೇ.16ರಿಂದ ಶೇ.8ಕ್ಕೆ
* ಸಗಟು ಸಿಮೆಂಟ್ ಮೇಲೆ ಅಬಕಾರಿ ಸುಂಕ ಟನ್‌ಗೆ 400 ರೂ.
* ಕೇಂದ್ರೀಯ ಮಾರಾಟ ತೆರಿಗೆ ಶೇ.3ರಿಂದ ಶೇ.2ಕ್ಕೆ ಇಳಿಕೆ
* ಬ್ಯಾಂಕಿಂಗ್ ನಗದು ವ್ಯವಹಾರ ತೆರಿಗೆ ಹಿಂದಕ್ಕೆ
* ನಗರಕ್ಕೆ ಹೊರತಾದ ಪ್ರದೇಶಗಳಲ್ಲಿ ಆಸ್ಪತ್ರೆ ನಿರ್ಮಿಸಲು ಇರುವ ತೆರಿಗೆ ರಜೆ 5 ವರ್ಷ
* ಯುನೆಸ್ಕೋ ಹೆರಿಟೇಜ್ ಪ್ರದೇಶಗಳಲ್ಲಿ 2,3,4 ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ 5 ವರ್ಷ ತೆರಿಗೆ ರಜೆ
* ಹಿರಿಯ ನಾಗರಿಕರ ತೆರಿಗೆ ರಿಯಾಯಿತಿ ಮಿತಿ ರೂ. 1,95,000 ರಿಂದ 2,25,000 ರೂ.ಗೆ
* ಕಾರ್ಪೊರೇಟ್ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲ
* ಸರ್ಚಾರ್ಜ್ ದರದಲ್ಲಿ ಯಾವುದೇ ಬದಲಾವಣೆಯಿಲ್ಲ
* ಆದಾಯ ತೆರಿಗೆ ಮಿತಿ 1.5 ಲಕ್ಷಕ್ಕೆ ಏರಿಕೆ, ಮಹಿಳೆಯರಿಗೆ 1.8 ಲಕ್ಷ
* ತೆರಿಗೆ-ಜಿಡಿಪಿ ಅನುಪಾತ 12.5 ಶೇ.ಕ್ಕೆ ಏರಿಕೆ
* ಸೇವಾ ತೆರಿಗೆಯಡಿ ನಾಲ್ಕು ಹೊಸ ಸೇವೆಗಳು
* ಹೈಬ್ರಿಡ್ ಕಾರುಗಳ ಅಬಕಾರಿ ಸುಂಕ ಶೇ.24ರಿಂದ ಶೇ.14ಕ್ಕೆ ಇಳಿಕೆ
* ಫಿಲ್ಟರ್ ಮತ್ತು ಫಿಲ್ಟರ್ ರಹಿತ ಸಿಗರೇಟುಗಳಿಗೆ ಸಮಾನ ಅಬಕಾರಿ ಸುಂಕ
* ಏಡ್ಸ್-ನಿರೋಧಕ ಔಷಧಗಳಿಗೆ ಅಬಕಾರಿ ಸುಂಕ ಇಲ್ಲ
* ಸಣ್ಣ ಕಾರು, ದ್ವಿ-ತ್ರಿ ಚಕ್ರ ವಾಹನಗಳ ಅಬಕಾರಿ ಸುಂಕ ಶೇ.16ರಿಂದ ಶೇ.12ಕ್ಕೆ ಇಳಿಕೆ
* ಕೆಲವು ಐಟಿ, ಹಾರ್ಡ್‌ವೇರ್ ಪರಿಕರಗಳಿಗೆ ಕಸ್ಟಮ್ಸ್ ಸುಂಕ ರಿಯಾಯಿತಿ
* ಫಾರ್ಮಾಸ್ಯೂಟಿಕಲ್ ವಲಯ ಅಬಕಾರಿ ಸುಂಕ ಶೇ.16ರಿಂದ ಶೇ.8ಕ್ಕೆ ಇಳಿಕೆ
* ಸೆಟ್ ಟಾಪ್ ಬಾಕ್ಸ್‌ಗಳಿಗೆ ಅಬಕಾರಿ ಸುಂಕ ಪೂರ್ಣ ರಿಯಾಯಿತಿ
* ಜೀವರಕ್ಷಕ ಔಷಧಿಗಳಿಗೆ ಅಬಕಾರಿ ಶುಲ್ಕ ಶೂನ್ಯ
* ಜೀವರಕ್ಷಕ ಔಷಧ ತಯಾರಿಕೆಗೆ ಬಳಸುವ ವಸ್ತುಗಳ ಕಸ್ಟಮ್ಸ್ ಸುಂಕ ಶೇ.10ರಿಂದ ಶೇ.5ಕ್ಕೆ ಇಳಿಕೆ
* ರಾಜ್ಯಾದಾಯ ಕೊರತೆ ಶೇ.3.1
* ಕಾಮನ್ವೆಲ್ತ್ ಕ್ರೀಡೆಗೆ 624 ಕೋಟಿ ರೂ.
* 1.57 ದಶಲಕ್ಷ ಗೃಹಗಳ ನಿರ್ಮಾಣ
* 22 ಸೈನಿಕ ಶಾಲೆಗಳಿಗೆ 44 ಕೋಟಿ ರೂ.
* ರಾಷ್ಟ್ರೀಯ ವ್ಯಾಘ್ರ ಸಂರಕ್ಷಣಾ ಪ್ರಾಧಿಕಾರಕ್ಕೆ 50 ಕೋಟಿ ರೂ. ಅನುದಾನ
* ರಕ್ಷಣಾ ಅನುದಾನ ಶೇ.10 ಅಂದರೆ 1,05,000 ಕೋಟಿಗೆ ಏರಿಕೆ
* ಎಲ್ಐಸಿಗೆ 1 ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನ
* ರಾಷ್ಟ್ರೀಯ ಹೆದ್ದಾರಿ ಯೋಜನೆಗೆ 12,966 ಕೋಟಿ ರೂ.
* ಪಿಡಿಎಸ್ ಯೋಜನೆಯಡಿ ಆಹಾರ ಸಬ್ಸಿಡಿಗೆ 32,667 ಕೋಟಿ ರೂ.
* ಎಲ್ಲಾ ವಹಿವಾಟುಗಳಿಗೆ ಪಾನ್ (ಪಿಎಎನ್) ಕಾರ್ಡ್ ಅಗತ್ಯ
* ಟ್ರೇಡಿಂಗ್, ಕಾರ್ಪೊರೇಟ್ ಬಾಂಡ್‌ಗಳಿಗೆ ಮಾರುಕಟ್ಟೆ ವಿಸ್ತರಣೆ
* ನೇಕಾರಿಕೆ ವಲಯದ ಕ್ಲಸ್ಟರ್‌ಗಳಿಗೆ 340 ಕೋಟಿ ರೂ.
* ಜವಳಿ ಪಾರ್ಕ್‌ಗಳಿಗೆ 450 ಕೋಟಿ ರೂ., 30 ಜವಳಿ ಪಾರ್ಕ್‌ಗಳ ಸ್ಥಾಪನೆ
* ರಫ್ತು ವಲಯಕ್ಕೆ 8,351 ಕೋಟಿ ರೂ. ಸಬ್ಸಿಡಿ
* ವಿದ್ಯುತ್ ವಿತರಣೆಗೆ 800 ಕೋಟಿ ರೂ.
* ಮಾರ್ಚ್ ಒಳಗೆ 17 ಲಕ್ಷ ನೇಕಾರರು ಆರೋಗ್ಯ ವಿಮಾ ಯೋಜನೆಯಡಿ
* ಒಂದು ಲಕ್ಷ ಹೊಸ ಗ್ರಾಮೀಣ ಬ್ರಾಡ್‌ಬ್ಯಾಂಡ್ ಕೇಂದ್ರಗಳು
* 11ನೇ ಯೋಜನೆಯಡಿ ವಿದ್ಯುತ್ ಉತ್ಪಾದನಾ ಮಿತಿ 77,500 ಮೆ.ವಾ.
* ಸಾಲ ಮನ್ನಾದಿಂದ 4 ಕೋಟಿ ರೈತರಿಗೆ ಲಾಭ
* ಸಾಲ ಮನ್ನಾದ ಒಟ್ಟು ಅಂದಾಜು ಮೊತ್ತ 50 ಸಾವಿರ ಕೋಟಿ ರೂ.
* ಬಜೆಟ್ ಘೋಷಣೆಯಾದ ತಕ್ಷಣ ಸೆನ್ಸೆಕ್ಸ್ ಶೇ.2 ಇಳಿಕೆ
* ರೈತರ ಸಾಲಮನ್ನಾ ಯೋಜನೆ 2008ರ ಜೂನ್ 30ರೊಳಗೆ ಪೂರ್ಣ
* ಕಿರು ರೈತರಿಗೆ ಸಾಲಮನ್ನಾ ಘೋಷಣೆ: ಬ್ಯಾಂಕು ಶೇರುಗಳ ಸೂಚ್ಯಂಕ ಕುಸಿತ
|