ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಬಜೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈತರಿಗೊಂದಿಷ್ಟು ನೆಮ್ಮದಿ: ಸಾಲಮನ್ನಾಗೆ 60,000 ಕೋಟಿ
PTI
ರೈತರನ್ನು ನೇಣಿನ ಕುಣಿಕೆಯಿಂದ ಆಚೆತರಲು ಅನೇಕ ಯೋಜನೆಗಳನ್ನು ಕೇಂದ್ರ ಹಣಕಾಸು ಸಚಿವ ಚಿದಂಬರಂ ಅವರು ಸಂಸತ್ತಿನಲ್ಲಿ ಶುಕ್ರವಾರ ಮಂಡಿಸಿರುವ 2008-09ರ ಮುಂಗಡ ಪತ್ರದಲ್ಲಿ ರೂಪಿಸಲಾಗಿದೆ.

ಎರಡು ಹೆಕ್ಟೇರ್‌ಗಳಷ್ಟು ಜಾಗವನ್ನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ಕೃಷಿಕರ ಎಲ್ಲಾ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಲಾಗಿದೆ.

ಸಾಲಮನ್ನಾ ಯೋಜನೆಯಿಂದಾಗಿ 3 ಕೋಟಿ ಸಣ್ಣ ರೈತರು ಮತ್ತು 1 ಕೋಟಿ ಮಧ್ಯಮ ರೈತರು ಸೇರಿದಂತೆ 4 ಕೋಟಿ ರೈತರು ಲಾಭ ಪಡೆಯಲಿದ್ದಾರೆ. ಈ ಯೋಜನೆಯಿಂದಾಗಿ ಸರಕಾರದ ಕಜಾನೆಗೆ 60 ಸಾವಿರ ಕೋಟಿ ರೂಪಾಯಿ ನಷ್ಟವಾಗಲಿದೆ. 2007 ಮಾರ್ಚ್ 31ರವರೆ ರೈತರು ಪಡೆದಿರುವ ಎಲ್ಲಾ ಸಾಲಗಳಿಗೂ ಈ ಯೋಜನೆ ಅನ್ವಯವಾಗಲಿದೆ. ಸಾಲಮನ್ನಾದ ಮೊತ್ತವು ಒಟ್ಟಾರೆ ಬ್ಯಾಂಕ್ ಸಾಲದ ಶೇ 4ರಷ್ಟು ಆಗಲಿದೆ.

ಇದಲ್ಲದೆ, ಸಾಲಮನ್ನಾ ಯೋಜನೆ ವ್ಯಾಪ್ತಿಯಡಿ ಬರದ ರೈತರ ಅನುಕೂಲಕ್ಕಾಗಿ ಏಕಕಾಲಕ್ಕೆ ಸಾಲ ಇತ್ಯರ್ಥದ ವಿಶೇಷ ಯೋಜನೆಯನ್ನೂ ಸಹ ಮುಂಗಡ ಪತ್ರ ಒಳಗೊಂಡಿದೆ.
ರೈತರಿಗೆ ಹೊಸಸಾಲದ ಭರವಸೆಯನ್ನೂ ಬಜೆಟ್ ನೀಡಿದೆ. ಇದಲ್ಲದೆ ನೀರಾವರಿ ಅಭಿವೃದ್ಧಿ ಯೋಜನೆಗಳನ್ನೂ ಹಮ್ಮಿಕೊಂಡಿದೆ. ರಸಗೊಬ್ಬರಗಳ ಮೇಲಿನ ಸಹಾಯವನ್ನು ಮುಂದುವರಿಸಿದೆ. ಇದರೊಂದಿಗೆ ಕೃಷಿ ವಿಮೆಯನ್ನೂ ಮುಂದುವರಿಸುವುದಾಗಿ ಹೇಳಲಾಗಿದೆ.

ಒಟ್ಟಾರೆಯಾಗಿ ರೈತರಿಗೆ ಈ ಕೆಳಗಿನ ಅನುಕೂಲಗಳನ್ನು ಬಜೆಟ್ ಒಳಗೊಂಡಿದೆ
*ರೈತರಿಗೆ ಹೊಸ ಸಾಲ ಮನ್ನಾಯೋಜನೆ

*2008-09ರಲ್ಲಿ ರೈತರಿಗೆ 2,80,000 ಕೋಟಿ ರೂಪಾಯಿಗಳ ಸಾಲದ ಗುರಿ

*ಮಳೆಯಾಧರಿತ ಕೃಷಿಪ್ರದೇಶಾಭಿವೃದ್ಧಿ ಯೋಜನೆ ಇತರ ಪ್ರದೇಶಗಳಲ್ಲಿ ಆರಂಭ. ಇದಕ್ಕೆ 500ಕೋಟಿ ರೂಪಾಯಿ ಮೀಸಲು

* ಹೆಚ್ಚುವರಿ ನೀರಾವರಿ ಸಾಮರ್ಥ್ಯವನ್ನು ಐದು ಲಕ್ಷ ಹೆಕ್ಟೇರ್‌ಗಳ ಪ್ರದೇಶಕ್ಕೆ ಏರಿಕೆ

*500 ಮಣ್ಣು ಪರೀಕ್ಷ ಪ್ರಯೋಗಾಲಯಗಳ ಸ್ಥಾಪನೆ

*200 ಜಿಲ್ಲೆಗಳಿಗೆ ಸಂಚಾರಿ ಮಣ್ಣು ಪರೀಕ್ಷಾ ಪ್ರಯೋಗಾಲಯಕ್ಕೆ 175 ಕೋಟಿ ರೂಪಾಯಿ

*ಮುಂಗಾರು ಮತ್ತು ಹಿಂಗಾರು ಬೆಳೆಗಳಿಗೆ ರಾಷ್ಟ್ರೀಯ ಕೃಷಿ ವಿಮೆ ಮುಂದುವರಿಕೆ

* ಗೊಬ್ಬರದ ಮೇಲಿನ ಸಬ್ಸಿಡಿ ಮುಂದುವರಿಕೆ

* ಸೂಕ್ಷ್ಮ-ಸಾಲಗಳಿಗಾಗಿ ಫ್ರೊ. ವಿದ್ಯನಾಥನ್ ಸಮಿತಿ ಶಿಫಾರಸುಗಳ ಜಾರಿ

*ಎಲ್ಲಾ ಸಾರ್ವಜನಿಕ ವಲಯದ ಮತ್ತು ಸಹಕಾರಿ ಬ್ಯಾಂಕುಗಳಿಂದ 2007ರ ಮಾರ್ಚ್ ತನಕ ಮಂಜೂರಾಗಿದ್ದು ಮರುಪಾವತಿಗೆ ಕಾಯುತ್ತಿರುವ ಎಲ್ಲಾ ಸಾಲಗಳು ಸಾಲ ಮನ್ನಾದ ವ್ಯಾಪ್ತಿಗೆ

*ಒಂದು ಹೆಕ್ಟೇರ್ ಜಾಗ ಹೊಂದಿರುವ ಅತಿಸಣ್ಣ ರೈತರು ಸಂಪೂರ್ಣ ಸಾಲ ಮನ್ನಾ

*ಒಂದರಿಂದ ಎರಡು ಹೆಕ್ಟೇರ್ ಜಾಗ ಹೊಂದಿರು ಸಣ್ಣ ರೈತರ ಸಂಪೂರ್ಣ ಸಾಲ ಮನ್ನಾ

*ಇತರ ಎಲ್ಲಾ ರೈತರಿಗೆ ಒಂದೇ ವೇಳೆಗೆ ಸಾಲಇತ್ಯರ್ಥ ಯೋಜನೆ

*ವಿಶೇಷ ಪ್ಯಾಕೇಜುಗಳ ಮೂಲಕ ಕೃಷಿ ಸಾಲಗಳ ಪುನಾರಚನೆ. ಈ ಸಾಲಗಳು ಯೋಜನೆಯಡಿ ಮನ್ನಾಗೆ ಅರ್ಹ

*2008ರ ಜೂನ್ 30ರೊಳಗೆ ಸಾಲಮನ್ನಾ ಜಾರಿ ಸಂಪೂರ್ಣ

*ಹೊಸ ಸಾಲಗಳಿಗೂ ರೈತರಿಗೆ ಅರ್ಹತೆ
ಮತ್ತಷ್ಟು
ಬಜೆಟ್ 2008-09 ಮುಖ್ಯಾಂಶಗಳು ಇಲ್ಲಿವೆ
ಆದಾಯ ತೆರಿಗೆ ಪಾವತಿದಾರರಿಗೆ ದಿಲ್‌ಖುಷ್
ಕೃಷಿಗೆ ಬಂಪರ್! ಶಿಕ್ಷಣಕ್ಕೆ ಆದ್ಯತೆ
ರೈತರ ಸಾಲ ಸಂಪೂರ್ಣ ಮನ್ನಾ
ರಾಷ್ಟ್ರೀಯ ಕೃಷಿವಿಕಾಸ ಯೋಜನೆಗೆ 2,80,000 ಕೋಟಿ
ವಿತ್ತ ಸಚಿವರಿಂದ ಆಯ-ವ್ಯಯ ಮಂಡನೆ ಆರಂಭ