ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಬಜೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಜೆಟ್‌ಗೆ ಐಟಿ ವಲಯದ ಮಿಶ್ರಪ್ರತಿಕ್ರಿಯೆ
ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು ಶುಕ್ರವಾರ ಮಂಡಿಸಿರುವ ಬಜೆಟ್‌ಗೆ ಮಾಹಿತಿ ತಂತ್ರಜ್ಞಾನ ವಲಯದ ಪ್ರಮುಖರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅವುಗಳು ಕೆಲವು ಪ್ರತಿಕ್ರಿಯೆಗಳು ಇಂತಿವೆ.

"ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅನುಕೂಲಗಳನನ್ನು ಜನತೆಯ ಬಳಿಗೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅಂತರ್ಜಾಲ ಶಕ್ತ ಸಾಮಾನ್ಯ ಸೇವಾಕೇಂದ್ರಗಳು(ಸಿಎಸ್‌ಸಿಎಸ್) ಮತ್ತು ರಾಜ್ಯವ್ಯಾಪಿ ಪ್ರಾದೇಶಿಕ ಜಾಲ(ಸ್ವಾನ್) ಸಂಸ್ಥೆಗಳ ಸಂಖ್ಯೆ ಒಂದು ಲಕ್ಷದಷ್ಟಿದ್ದರೂ, ತಂತ್ರಜ್ಞಾನ ವಂಚಿತ ಶತಕೋಟಿ ಭಾರತೀಯರಿಗೆ ಹೋಲಿಸಿದರೆ ಈ ಸಂಖ್ಯೆ ಸಾಕಷ್ಟಿಲ್ಲ" ಎಂಬುದಾಗಿ, ಹನ್ನೊಂದು ಭಾಷೆಗಳಲ್ಲಿ ಪೋರ್ಟಲ್ ಮತ್ತು ಇ-ಮೇಲ್ ಸೇವೆ ಒದಗಿಸುತ್ತಿರುವ ಭಾರತ ಬಹುದೊಡ್ಡ ಬಹುಭಾಷಾ ಪೋರ್ಟಲ್ ಸೇವೆ ನೀಡುಗ ಸಂಸ್ಥೆ ವೆಬ್‌ದುನಿಯಾ ಡಾಟ್‌ಕಾಂನ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಂಕಜ್ ಜೈನ್ ಹೇಳಿದ್ದಾರೆ.

ಇನ್ನಷ್ಟು ಮಂದಿಗೆ ತಂತ್ರಜ್ಞಾನವನ್ನು ತಲುಪಿಸಲು ಪ್ರತಿವರ್ಷ ಈ ರಂಗದಲ್ಲಿ ಐದುಪಟ್ಟು ಹೆಚ್ಚಳವಾಗುವ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಹೊಸ ಐಐಟಿಗಳು, ಆವಿಷ್ಕಾರಗಳಿಗೆ ವಿದ್ಯಾರ್ಥಿವೇತನ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವಿಶ್ವವಿದ್ಯಾನಿಲಯಗಳನ್ನು ಸಂಪರ್ಕಿಸಲು ರಾಷ್ಟ್ರೀಯ ಜ್ಞಾನಜಾಲಗಳ ಸ್ಥಾಪನೆ ಮುಂತಾದ ಸರಣಿ ಪ್ರಸ್ತಾಪಗಳ ಮೂಲಕ ಭಾರತವನ್ನು ಜ್ಞಾನಕೇಂದ್ರವನ್ನಾಗಿಸಲು ನೀಡಿರುವ ಪ್ರಾಮುಖ್ಯತೆಯು ಸ್ವಾಗತಾರ್ಹ ಎಂದು ಸೈಬರ್ ಮೀಡಿಯಾದ ಅಧ್ಯಕ್ಷ ಹಾಗೂ ಐಐಟಿ ಹಳೆವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಪ್ರದೀಪ್ ಗುಪ್ತಾ ಹೇಳಿದ್ದಾರೆ.

ಶಿಕ್ಷಣ, ಆರೋಗ್ಯ ವಲಯ ಮತ್ತು ಹೊಸ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಿಶನ್‌ನ ಸ್ಥಾಪನೆಗಳಿಗೆ ಸಿಂಹಪಾಲು ಧಕ್ಕಿರುವುದು ರಾಷ್ಟ್ರದ ಆರ್ಥಿಕಾಭಿವೃದ್ಧಿಗೆ ಜ್ಞಾನಾಧಾರಿತ ಉದ್ಯಮಗಳು ಹೆಚ್ಚಿನ ಕೊಡುಗೆ ನೀಡಲು ಧನಾತ್ಮಕ ಸೂಚನೆ ನೀಡಿದೆ ಎಂದು ಐಡಿಸಿ ಇಂಡಿಯಾದ ಮಾಹಿತಿ ತಂತ್ರಜ್ಞಾನ ಮತ್ತು ಬೌದ್ಧಿಕ ಮತ್ತು ಸಲಹಾ ಸಂಸ್ಥೆಯ ದೇಶೀಯ ಮ್ಯಾನೆಜರ್ ಕಪಿಲ್ ದೇವ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಿಶನ್ ಸ್ಥಾಪನೆಯ ಮೂಲಕ ವಿತ್ತಮಂತ್ರಿಗಳು ಕೌಶಲ್ಯ ಅಭಿವೃದ್ಧಿ ಕಾರ್ಯವನ್ನು ಮಟ್ಟಹಾಕಿದ್ದಾರೆ. ಈ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಲು ಜ್ಞಾನ ಉದ್ಯಮಕ್ಕೆ ಸಂತಸವಾಗಲಿದೆ ಎಂದು ನೋಯ್ಡಾ ವಿಶೇಷ ಆರ್ಥಿಕ ವಲಯದ ಎಂಜೀನಿಯರಿಂಗ್ ಸಾಫ್ಟ್‌ವೇರ್ ಸಂಸ್ಥೆಯ ಆಡಳಿತ ನಿರ್ದೇಶಕ ಆಸೋಕೆ ಕೆ ಲಾಹ ಹೇಳಿದ್ದಾರೆ.
ಮತ್ತಷ್ಟು
ರೈತರಿಗೊಂದಿಷ್ಟು ನೆಮ್ಮದಿ: ಸಾಲಮನ್ನಾಗೆ 60,000 ಕೋಟಿ
ಬಜೆಟ್ 2008-09 ಮುಖ್ಯಾಂಶಗಳು ಇಲ್ಲಿವೆ
ಆದಾಯ ತೆರಿಗೆ ಪಾವತಿದಾರರಿಗೆ ದಿಲ್‌ಖುಷ್
ಕೃಷಿಗೆ ಬಂಪರ್! ಶಿಕ್ಷಣಕ್ಕೆ ಆದ್ಯತೆ
ರೈತರ ಸಾಲ ಸಂಪೂರ್ಣ ಮನ್ನಾ
ರಾಷ್ಟ್ರೀಯ ಕೃಷಿವಿಕಾಸ ಯೋಜನೆಗೆ 2,80,000 ಕೋಟಿ