ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಬಜೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಹಿಳಾ ಸ್ನೇಹಿ ಬಜೆಟ್ ಬಯಸಿದ್ದ ಪ್ರೀತಿ ಝಿಂಟಾ
PTI
ವಿತ್ತಸಚಿವ ಪಿ.ಚಿದಂಬರಂ ಅವರು 2008-09ರ ಬಜೆಟ್ ಮಂಡಿಸುವ ಕೆಲವು ದಿನಗಳ ಹಿಂದೆ ಅವರನ್ನು ಭೇಟಿ ಮಾಡಿದ್ದ ಬಾಲಿವುಡ್ ನಟಿ ಪ್ರೀತಿ ಝಿಂಟಾ, ಮುಂಗಡ ಪತ್ರವನ್ನು ಮಹಿಳಾ ಸ್ನೇಹಿಯಾಗಿಸುವಂತೆ ಒತ್ತಾಯಿಸಿದ್ದರು.

ರೇಣುಕಾ ಚೌಧರಿ ಹಾಗೂ ಕೆಲವು ಎನ್‌ಜಿಒಗಳೊಂದಿಗೆ ಸಚಿವರನ್ನು ಭೇಟಿ ಮಾಡಿರುವ ಪ್ರೀತಿ, ಅವರೊಂದಿಗೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು. ಔದ್ಯಮಿಕ ವಲಯದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಉತ್ತೇಜಕ ಅಂಶಗಳನ್ನು ನೀಡುವ ಮೂಲಕ ಮಹಿಳಾ ಸ್ನೇಹಿ ಬಜೆಟ್ ನೀಡಲು ಈ ನಿಯೋಗ ಒತ್ತಾಯಿಸಿತ್ತು.

ಸಾಮಾಜಿಕ ವಿಷಯಕ್ಕಾಗಿ ಸಚಿವರನ್ನು ಭೇಟಿ ಮಾಡಲು ಕಾರಣವೇನು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಕುಳಿಗೆನ್ನೆ ಹುಡುಗಿ ಪ್ರೀತಿ, ಎಲ್ಲಾ ವ್ಯಕ್ತಿಗಳ ಏಳಿಗೆಯೂ ಒಂದು ನೈಸರ್ಗಿಕ ಪ್ರಕ್ರಿಯೆ ಎಂದು ತಾನು ಭಾವಿಸಿರುವುದಾಗಿ ಹೇಳಿದರು. ಈ ರಾಷ್ಟ್ರದಲ್ಲಿ ಧ್ವನಿ ಎತ್ತುವ ಮಹಿಳೆಯರು ಉತ್ತಮ ಅವಕಾಶಗಳಿಗಾಗಿ ಒಟ್ಟಾಗುವ ಅವಶ್ಯಕತೆ ಇದೆ. "ಉದಾಹರಣೆಗೆ ನೋಡಿ. ಒಂಟಿ ಮಹಿಳೆಯರು ಅಥವಾ ವಿಧವೆಯರು ಒಂದು ಗೃಹಸಾಲವನ್ನು ಕೇಳುವುದು ಕಷ್ಟಕರ. ಅವರು ಜತೆಜಾಮೀನು ನೀಡಲು ಸಾಧ್ಯವಾಗುವುದಿಲ್ಲ. ಇಂತಹ ಬದಲಾವಣೆಗಳನ್ನು ತಾನು ನೋಡಲಿಚ್ಛಿಸುತ್ತೇನೆ" ಎಂದು ಹೇಳಿರುವ ಅವರು ಉತ್ತಮ ಆರೋಗ್ಯ ಮತ್ತು ನೈರ್ಮಲ್ಯ ಹಾಗೂ ಹೆಣ್ಣುಮಕ್ಕಳಿಗೆ ಉಚಿತ ಹಾಗೂ ಖಡ್ಡಾಯ ಶಿಕ್ಷಣವನ್ನು ಬಯಸುವುದಾಗಿ ಹೇಳಿದ್ದಾರೆ.

ಹೆಣ್ಣುಮಗು ಒಂದು ಹೊರೆ ಎಂದು ಭಾವಿಸುವುದನ್ನು ಭಾರತ ನಿಲ್ಲಿಸಬೇಕು ಎಂಬುದಾಗಿ, ಕ್ಯಾ ಕೆಹೆನಾ ಸಿನಿಮಾದಲ್ಲಿ ಒಂಟಿ ತಾಯಿಯ ಪಾತ್ರದಲ್ಲಿ ಅದ್ಭುತ ನಟನೆ ನೀಡಿದ ಗ್ಲಾಮರಸ್ ನಟಿ ಬುದ್ಧಿವಂತಿಕೆಯ ಮಾತುಗಳನ್ನಾಡಿದ್ದಾರೆ.

ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರ ವಿಧವೆ ಪತ್ನಿಯರಿಗೆ ಸಾಲ ಹಾಗೂ ಮಕ್ಕಳನ್ನು ಬಿಟ್ಟು ತೆರಳುತ್ತಾರೆ. ವಿಧವೆಯರು ಯಾರಿಗೂ ಬೇಡವಾಗುತ್ತಾರೆ. ಆಕೆಯೊಬ್ಬ ತಾಯಿ, ಸೃಷ್ಟಿಕರ್ತೆ. ಮನೆಕಟ್ಟುವ ಈಕೆ ಮನೆಯಿಲ್ಲದವಳಾಗುತ್ತಾಳೆ ಎಂದು ಮಾರ್ಮಿಕವಾಗಿ ಚಿಂತಿಸಿರುವ ಪ್ರೀತಿ, ರೈತರ ಸಾಲಗಳ ಬಡ್ಡಿದರದಲ್ಲಿ ಮೃದುತ್ವ ಸಾಕಷ್ಟು ವ್ಯತ್ಯಾಸ ಉಂಟುಮಾಡಬಲ್ಲುದು ಎಂದು ಸಚಿವರೊಂದಿಗೆ ಮಾತುಕತೆ ನಡೆಸಿದ ವೇಳೆ ಹೇಳಿದ್ದಾರೆ.
ಮತ್ತಷ್ಟು
ರೈತರ ಸಾಲ ಮನ್ನಾವೇ ಪ್ರಮುಖ ವಿಷಯ
ಬಜೆಟ್ ಕಣ ಕಣದಲ್ಲೂ ಚುನಾವಣೆಯ ವಾಸನೆ...!
ಯಾವುದು ಅಗ್ಗ; ಯಾವುದು ತುಟ್ಟಿ
ಬಜೆಟ್‌ಗೆ ಐಟಿ ವಲಯದ ಮಿಶ್ರಪ್ರತಿಕ್ರಿಯೆ
ರೈತರಿಗೊಂದಿಷ್ಟು ನೆಮ್ಮದಿ: ಸಾಲಮನ್ನಾಗೆ 60,000 ಕೋಟಿ
ಬಜೆಟ್ 2008-09 ಮುಖ್ಯಾಂಶಗಳು ಇಲ್ಲಿವೆ