PTI ಅವಿನಾಶ್ ಬಿ. ದೀಪಗಳ ಆವಳಿ ದೀಪಾವಳಿ. ಅಜ್ಞಾನದ ಕಾರಿರುಳು ಹೋಗಲಾಡಿಸಿ ಸುಜ್ಞಾನದ ಜ್ಯೋತಿಯನ್ನು ಮೂಡಿಸುವ ಬೆಳಕಿನ ಹಬ್ಬ ದೀಪಾವಳಿ ಕತ್ತಲೆಯಿಂದ ಬೆಳಕಿನೆಡೆಗೆ ಮುನ್ನಡೆಸುವ ದ್ಯೋತಕ. ಅಂದು ಎಲ್ಲರ ಮನೆಯೂ ತೈಲದೀಪಗಳಿಂದ ಬೆಳಗುತ್ತಿದ್ದರೆ, ಮನಸ್ಸುಗಳು ಕೂಡ ಉತ್ಸಾಹ ಸಂತೋಷದಿಂದ ಬೆಳಗುತ್ತಿರುತ್ತವೆ.ಈ ಹಬ್ಬವನ್ನು ಮುಖ್ಯವಾಗಿ ಐದು ದಿನಗಳಲ್ಲಿ ವಿಶೇಷ ಪೂಜೆಗಳಿಂದ ಆಚರಿಸಲಾಗುತ್ತದೆ. ಪ್ರಥಮ ದಿನವಾದ ಆಶ್ವಯುಜ ಬಹುಳ ತ್ರಯೋದಶಿಯಿಂದ ತೊಡಗಿ ಐದನೇ ದಿನವಾದ ಯಮದ್ವಿತೀಯದವರೆಗೆ ದೀಪಾವಳಿ ಆಚರಿಸಲಾಗುತ್ತದೆ. ಅಮಾವಾಸ್ಯೆಯ ಹದಿನೈದು ದಿನಗಳ