ಬಲಿಪಾಡ್ಯಮಿಗೂ ಶುಕ್ರಾಚಾರ್ಯರ ಒಂಟಿ ಕಣ್ಣಿಗೂ ಸಂಬಂಧವಿದೆ. ಬಲಿಚಕ್ರವರ್ತಿಯು ವಾಮನನಿಗೆ ದಾನ ಮಾಡುವ ಸಂದರ್ಭದಲ್ಲಿ ಶುಕ್ರಚಾರ್ಯರು ಅಡ್ಡ ಬಂದಕಾರಣ ಅವರು ಕಣ್ಣನ್ನು ಕಳೆದುಕೊಳ್ಳಬೇಕಾಯಿತು ಎಂದು ಪುರಾಣ ಹೇಳುತ್ತದೆ. ಆ ಕಥೆ ಹೀಗಿದೆ.ಹಿರಣ್ಯಕಶಪುವಿನ ಪುತ್ರ ಪ್ರಹ್ಲಾದ. ಆತನು ಮಹಾ ವಿಷ್ಣುಭಕ್ತ. ಆತನ ಮಗ ವಿರೋಚನ. ವಿರೋಚನನ ಪುತ್ರನೇ ಬಲಿಚಕ್ರವರ್ತಿ. ಈತನು ಕೂಡಾ ವಿಷ್ಣುಭಕ್ತನೇ. ಆದರೆ ರಾಕ್ಷಸ ವಂಶದಲ್ಲಿ ಹುಟ್ಟಿದವನಾದ್ದರಿಂದ ರಜೋಗುಣಗಳು ಹೆಚ್ಚಿದ್ದವು. ಅಂದರೆ ಹಿಂಸಾ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದನು.ಈತನ ರಾಜ್ಯವು ಸುಭಿಕ್ಷವಾಗಿತ್ತು. ವಿಷ್ಣುವನ್ನು ಪೂಜಿಸುವುದರೊಂದಿಗೆ