ಹಣದುಬ್ಬರ, ಆರ್ಥಿಕ ಬಿಕ್ಕಟ್ಟು ಮುಂತಾದವುಗಳು ಪಟಾಕಿ ಉದ್ಯಮದ ಮೇಲೂ ಗಾಢ ಪ್ರಭಾವ ಬೀರಿರುವುದರೊಂದಿಗೆ ಈ ಬಾರಿ ದೀಪಾವಳಿಯಲ್ಲಿ ಪಟಾಕಿಗಳು ಹೆಚ್ಚು ಸದ್ದು ಮಾಡಲಾರವು. ಕಳೆದ ಬಾರಿಗೆ ಹೋಲಿಸಿದರೆ ಪಟಾಕಿಗಳ ಬೆಲೆ ಸುಮಾರು ಶೇ.35ರಷ್ಟು ಏರಿಕೆ ಕಂಡಿವೆ. ಆದರೂ, ವಿಶೇಷವಾಗಿ ತಮಿಳುನಾಡಿನಲ್ಲಿ ಶಬ್ದ ಮಾಲಿನ್ಯದ ಮೇಲೆ ತೀವ್ರ ನಿಯಂತ್ರಣ ಹೇರಲಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಹಣವಿದ್ದವರ ಮೂಲಕವೂ ಪಟಾಕಿಗಳು ಹೆಚ್ಚು ಬೆಳಗುತ್ತವೆಯೇ ಹೊರತು ಶಬ್ದ ಮಾಡಲಾರವು.ಈ ಕುರಿತು ಸುಪ್ರೀಂ ಕೋರ್ಟ್ ಆದೇಶವೇ