ಅನ್ವೇಷಿ ND ದೀಪಾವಳಿಗೆ ವಿಶೇಷಾಂಕ ತರಬೇಕೆಂದು ತಲೆಯ ಕೂದಲುಗಳನ್ನು ರಪರಪನೆಯೂ, ಬಳಿಕ ಪರಪರನೆಯೂ ಕೆರೆದುಕೊಳ್ಳುತ್ತಾ, ಅತ್ತಿತ್ತ ಯೋಚಿಸುತ್ತಿರುವಾಗಲೇ ಕೇವಲ ಒಂದೇ ಒಂದು ವಿಶೇಷಾಂಕ ಸಿದ್ಧಪಡಿಸಬೇಕಿದ್ದರೆ ಹಲವಾರು ಲೇಖನಗಳು ಬೇಕೆಂಬುದು ಅರಿವಾಗಿಹೋಗಿಬಿಟ್ಟಿತ್ತು!ಹೀಗಾಗಿ ಆಲ್ ಇನ್ ಒನ್ ಲೇಖನ ಸಿದ್ಧಪಡಿಸಲು ಸಂತಾಪಕರು ಆದೇಶ ನೀಡಿದ ಮೇರೆಗೆ ಬೊಗಳೆ-ರಗಳೆ ಏಕಸದಸ್ಯ ಬ್ಯುರೋದಲ್ಲಿದ್ದ ಎಲ್ಲರೂ ಕಾರ್ಯಪ್ರವೃತ್ತರಾಗಿ ಒಂದೊಂದು ಗೆರೆಗಳನ್ನು ಗೀಚಿ ಬಿಟ್ಟರು. ಅವುಗಳನ್ನು ಸಂಗ್ರಹಿಸಿ ಇಲ್ಲಿ ಕೆಳಗೆ ಒಂದೊಂದಾಗಿ ಬಾಂಬ್ ಸುರಿಮಳೆಗರೆಯಲಾಗುತ್ತಿದೆ. ಅದನ್ನೇ ಹೆಕ್ಕಿಕೊಂಡು ಬೆಂಕಿ