ಸಮೀಕ್ಷೆ: ರವಿಪ್ರಕಾಶ್ ರೈ (ನ್ಯೂಸ್ ರೂಂ)ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಈ ಬಾರಿಯ ಚುನಾವಣೆಯಲ್ಲಿ ಭಾರೀ ಕುತೂಹಲವನ್ನು ಕೆರಳಿಸಿದೆ. ಇಲ್ಲಿ ಏನಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ. ಬೇರೆ ಪಕ್ಷಗಳು ಇಲ್ಲಿ ಸ್ಪರ್ಧಿಸಿದರೂ ಅದು ಲೆಕ್ಕಕ್ಕೆ ಮಾತ್ರ. ಕಳೆದ 19 ವರ್ಷಗಳಿಂದ ಕಾಂಗ್ರೆಸ್ನ ಭದ್ರ ಕೋಟೆಯಾದ ಬಂಟ್ವಾಳ ಪಾಳಯಕ್ಕೆ ಮೊಟ್ಟ ಮೊದಲು ಲಗ್ಗೆ ಇಟ್ಟು ಜಯಿಸಿದವರು ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ. ಇದರಿಂದ ಮೊದಲ ಬಾರಿಗೆ