ಕಡುಬಡವರಿಗೆ 2 ರೂ. ಗೆ ಕಿಲೋ ಅಕ್ಕಿ, ಹಾಲಿಗೆ ಬೆಂಬಲ ಬೆಲೆ, ಬಡವರ ಬಿಪಿಎಲ್ ಪಟ್ಟಿ, ಆದಾಯಮಿತಿ ಹೆಚ್ಚಳ, ಆಟೋ ಚಾಲಕರಿಗೆ, ಕಾಫಿ ತೋಟದ ಮತ್ತು ಅಸಂಘಟಿತ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್, ಬಡವರಿಗೆ ಮಂಗಳ ಸೂತ್ರ ಇದು ಬಿಜೆಪಿ ಚುನಾವಣಾ ಪ್ರಣಾಳಿಕೆಯ ಕೆಲವು ಸ್ಯಾಂಪಲ್ಗಳಷ್ಟೆ.ಪಕ್ಷವು ವಿಧ್ಯುಕ್ತವಾಗಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವುದಕ್ಕೆ ಮುಂಚಿತವಾಗಿಯೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ವಿವರಗಳನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ.ಬಿಪಿಎಲ್ ಪಟ್ಟಿಯ ಕಡುಬಡವರ ಆದಾಯ ಮಿತಿಯನ್ನು 11,800 ರೂ.ನಿಂದ