ಬಂಡಾಯದ ಬಿಸಿ ಜೆಡಿಎಸ್ ಪಕ್ಷವನ್ನೂ ಬಿಟ್ಟಿಲ್ಲ. ಮೊದಲ ಹಂತದ ಚುನಾವಣೆ ನಡೆಯುವ 89 ಕ್ಷೇತ್ರಗಳ ಪೈಕಿ 64 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ವರಿಷ್ಠರು ಆಖೈರುಗೊಳಿಸುತ್ತಿದ್ದಂತೆಯೇ ಭಿನ್ನಮತ ಸ್ಪೋಟಗೊಂಡಿದೆ.ಬಿ ಫಾರಂ ನೀಡಿಕೆಯಾಗುತ್ತಿದ್ದಂತೆಯೇ ಟಿಕೆಟ್ ವಂಚಿತರು ಪಕ್ಷದ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಮನೆಗೆ ಮುತ್ತಿಗೆ ಹಾಕಿ ಬೀಗ ಜಡಿದು ಸುಮಾರು 2 ಗಂಟೆಗಳವರೆಗೂ ಕೂಡಿಹಾಕಿದ ಘಟನೆಯೂ ನಡೆದಿದೆ. ಇದರೊಂದಿಗೆ ಕೆಲವು ಕಾರ್ಯಕರ್ತರು ವಿಷ ಕುಡಿದು ಆತ್ಮಹತ್ಯೆಗೂ ಪ್ರಯತ್ನಿಸಿದ್ದು ರಾಜಕಾರಣ ಸಾಗುತ್ತಿರುವ ದಿಕ್ಕಿಗೆ ಹಿಡಿದ