ಕರ್ನಾಟಕ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಪ್ರಕ್ರಿಯೆಗಳಿಗಾಗಿ ಚುನಾವಣಾ ಆಯೋಗವು ಶನಿವಾರ ಅಧಿಸೂಚನೆ ಹೊರಡಿಸಿದೆ.ಮೇ 22ರಂದು ನಡೆಯಲಿರುವ ತೃತೀಯ ಹಾಗೂ ಅಂತಿಮ ಸುತ್ತಿನ ಈ ಮತದಾನದಲ್ಲಿ 69 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.ಅಂತಿಮ ಸುತ್ತಿನ ಚುನಾವಣಾ ಸ್ಫರ್ಧೆಗೆ ನಾಮಪತ್ರ ಸಲ್ಲಿಸಲು ಮೇ 3 ಕೊನೆಯ ದಿನಾಂಕವಾಗಿದೆ. ಮೇ 5ರಂದು ನಾಮಪತ್ರಗಳ ಪರಿಶೀಲನೆ ಹಾಗೂ ನಾಮಪತ್ರಗಳ ಹಿಂತೆಗೆತಕ್ಕೆ ಮೇ 7 ಕೊನೆಯ ದಿನವಾಗಿದೆ.ಉತ್ತರ ಕರ್ನಾಟಕ ಪ್ರದೇಶದ ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ,