ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಚುನಾವಣೆ-08
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈಸೂರು: ಆಕ್ರಮ ಹಣ ಸಾಗಾಟ ಪತ್ತೆ
ಮೈಸೂರು: ವಿದ್ಯಾರಣ್ಯ ಪೊಲೀಸರು ಇಂದು(ಸೋಮವಾರ) ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 20ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.

ಈ ಘಟನೆಯಲ್ಲಿ ಬೆಂಗಳೂರಿನವರಾದ ರಂಗನಾಥ್ ಹಾಗೂ ಮುನಿರಾಜು ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನಿಂದ ನಂಜನಗೂಡಿಗೆ ಕಾರಿನಲ್ಲಿ ಹಣವನ್ನು ಸಾಗಿಸುತ್ತಿದ್ದಾಗ ನಂಜನಗೂಡು ಚೆಕ್ ಪೋಸ್ಟ್ ಬಳಿ ಪೊಲೀಸರು ಬಂಧಿಸಿದ್ದಾರೆ.

ವೈದ್ಯಕೀಯ ಸೀಟಿಗಾಗಿ ಮಠವೊಂದಕ್ಕೆ ಹಣ ನೀಡಲು ತಂದಿದ್ದು, ಕೆಲಸ ಅಗದ ಕಾರಣ ವಾಪಸ್ ತೆಗೆದುಕೊಂಡು ಹೋಗುತ್ತಿರುವುದಾಗಿ ಬಂಧಿತರಿಬ್ಬರು ತಿಳಿಸಿದ್ದಾರೆ. ಆದರೆ ಚುನಾವಣೆಗಾಗಿ ಈ ಹಣವನ್ನು ಒಯ್ಯಲಾಗುತ್ತಿತ್ತು ಎಂಬ ಸಂಶಯದಿಂದ ಪೊಲೀಸರು ತೀವ್ರ ತನಿಖೆ ಮುಂದುವರೆಸಿದ್ದಾರೆ.

ಈ ಮಧ್ಯೆ, ಅಕ್ರಮವಾಗಿ ಸುಮಾರು 49ಸಾವಿರ ಹಣವನ್ನು ಸ್ಕಾರ್ಫಿಯೋದಲ್ಲಿ ಸಾಗಿಸುತ್ತಿದ್ದ ಐವರನ್ನು ಮೈಸೂರಿನ ಸಾಲುಂಡಿ ಬಳಿ ವಿಜಯಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಂಜೇಗೌಡ ಬೆಂಬಲಿಗರು ಎಂದು ಗುರುತಿಸಲಾಗಿದೆ. ಈ ಹಣವನ್ನು ವ್ಯವಹಾರದ ಉದ್ದೇಶದಿಂದ ತಂದಿರುವುದಾಗಿ ಬಂಧಿತರು ತಿಳಿಸಿದ್ದರೂ, ಅದರಲ್ಲಿ ಬಿಜೆಪಿಗೆ ಸೇರಿದ ಕರಪತ್ರಗಳು ದೊರೆತಿರುವುದರಿಂದ ಇದು ಚುನಾವಣೆಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮತ್ತಷ್ಟು
ಭಯೋತ್ಪಾದನೆ ಹುಟ್ಟುಹಾಕಿದ್ದೇ ಬಿಜೆಪಿ:ಮೊಯಿಲಿ ಆರೋಪ
ಭಯೋತ್ಪಾದನೆ ನಿಗ್ರಹದಲ್ಲಿ ಯುಪಿಎ ವಿಫಲ: ರಾಜನಾಥ್
ಮೊಯ್ಲಿ ಚರ್ಚೆಗೆ ಬರಲಿ: ಯಡಿಯೂರ್ ಸವಾಲು
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾರಾಯಿ ಜಾರಿ: ಮೊಯಿಲಿ
ಅಧಿಕಾರಕ್ಕಾಗಿ ಜೆಡಿಎಸ್/ಕಾಂಗ್ರೆಸ್ಒಳಒಪ್ಪಂದ: ಬಿಎಸ್‌ವೈ
ಸ್ತ್ರೀಯಾಧಾರಿತ ಚುನಾವಣಾ ಪ್ರಣಾಳಿಕೆ: ಕುಮಾರ ಸ್ವಾಮಿ